ಧಾರವಾಡ: ಹಿರಿಯ ಸಂಶೋಧಕ ಡಾ. ಎಂ. ಎಂ.ಕಲಬುರ್ಗಿ ಅವರು ಕೊಲೆ ಪ್ರಕರಣದ ಐವರು ಆರೋಪಿಗಳನ್ನು ಗುರುವಾರ ಪೊಲೀಸರು ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಅಮಿತ ಬದ್ದಿ, ಚತುರ ಸೇರಿ ಐದು ಜನ ಆರೋಪಿಗಳನ್ನು ನ್ಯಾಯಾಲಯಕ್ಕೆ ಕರೆತಂದು ಪೊಲೀಸರು ಹಾಜರು ಪಡಿಸಿದ್ದು, ವಿಚಾರಣೆ ನಡೆಯುತ್ತಿದೆ. ಕಳೆದ 2015ರಲ್ಲಿ ಸಂಶೋಧಕ ಕಲಬುರ್ಗಿ ಅವರನ್ನು ಇಲ್ಲಿನ ಕಲ್ಯಾಣನಗರದಲ್ಲಿರುವ ಮನೆಯಲ್ಲಿ ಕೊಲೆ ಮಾಡಲಾಗಿತ್ತು.
ಎಂ.ಎಂ.ಕಲಬುರ್ಗಿ ಹತ್ಯೆ ಕೇಸ್: ಐವರು ಆರೋಪಿಗಳು ನ್ಯಾಯಾಲಯಕ್ಕೆ ಹಾಜರು - Accused produced in court
ಕಳೆದ 2015ರಲ್ಲಿ ಸಂಶೋಧಕ ಕಲಬುರ್ಗಿ ಅವರನ್ನು ಇಲ್ಲಿನ ಕಲ್ಯಾಣನಗರದಲ್ಲಿರುವ ಮನೆಯಲ್ಲಿ ಕೊಲೆ ಮಾಡಲಾಗಿತ್ತು. ಇಂದು ಐವರು ಆರೋಪಿಗಳನ್ನು ಪೊಲೀಸರು ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ಆರೋಪಿಗಳು ನ್ಯಾಯಾಲಯಕ್ಕೆ ಹಾಜರು
ನ್ಯಾಯಾಲಯದೊಳಗೆ ತೆರಳುವ ಮುನ್ನ ಆರೋಪಿಯೊಬ್ಬ ಮಾತನಾಡಿ, ಗೌರಿ ಲಂಕೇಶ ಪ್ರಕರಣ ಬೇಗ ಮುಗಿದರೆ ನಿರಪರಾಧಿಯಾಗಿ ಹೊರ ಬರ್ತಾರೆ . ಹೀಗಾಗಿ ಬೇಕೆಂತಲ್ಲೇ ಈ ಪ್ರಕರಣವನ್ನು ತಡ ಮಾಡುತ್ತಿದ್ದಾರೆ ಎಂದು ದೂರಿದರು.
ಇದನ್ನೂ ಓದಿ:ಹಿಜಾಬ್ ವಿಚಾರವಾಗಿ ಬಂದ್ಗೆ ಕರೆ ಕೊಟ್ಟವರು ರಾಷ್ಟ್ರ ವಿರೋಧಿಗಳು: ಸಚಿವ ಆರ್.ಅಶೋಕ್