ಧಾರವಾಡ: ಕಳೆದೊಂದು ವಾರದಿಂದ ಸುರಿದ ಮಳೆಯಿಂದಾಗಿ ರೈತರ ಜತೆಗೆ ಮೀನುಗಾರರು ಕೂಡಾ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲೆಯಲ್ಲಿ ಮೀನುಗಾರಿಕೆಯನ್ನೇ ಅವಲಂಬಿಸಿ ನೂರಾರು ಕುಟುಂಬಗಳು ಜೀವನ ನಡೆಸುತ್ತಿವೆ. ಆದರೆ, ಇತ್ತೀಚೆಗೆ ಸುರಿದ ಭಾರೀ ವರ್ಷಧಾರೆ ಅವರ ಬದುಕನ್ನು ಬೀದಿಗೆ ತಂದಿದೆ.
ಮೀನುಗಾರಿಕಾ ಇಲಾಖೆಯಿಂದ ಅನುಮತಿ ಪಡೆದಿರುವ ಮೀನುಗಾರರು, ಜಿಲ್ಲೆಯ 128 ಕೆರೆಗಳಲ್ಲಿ ಒಳನಾಡು ಮೀನುಗಾರಿಕೆ ಮಾಡುತ್ತಿದ್ದಾರೆ. ಮೀನುಗಾರರ ಜತೆಗೆ ಸಂಘಗಳು ಕೂಡಾ ಕ್ರಿಯಾತ್ಮಕವಾಗಿ ಕೆಲಸ ಮಾಡುತ್ತಿವೆ. ಪ್ರತಿವರ್ಷದಂತೆ ಈ ವರ್ಷವೂ 8 ಲಕ್ಷದಷ್ಟು ಮೀನುಮರಿಗಳನ್ನು ಕೆರೆಗಳಿಗೆ ಬಿಡಲಾಗಿತ್ತು. ಮೀನುಮರಿಗಳನ್ನು ಕೆರೆಗೆ ಬಿಟ್ಟ ಮರುದಿನವೇ ಮಳೆ ಸುರಿದಿದ್ದರಿಂದ ಮರಿಗಳೆಲ್ಲ ಕೊಚ್ಚಿಹೋಗಿವೆ.