ಕರ್ನಾಟಕ

karnataka

ETV Bharat / state

ಹೆಬ್ಬಾಳ್ಕರ್ ಕಾರ್ಖಾನೆಯ ಕೆಮಿಕಲ್ ಮಿಶ್ರಿತ ನೀರಿನಿಂದ ಮೀನುಗಳ‌ ಮಾರಣಹೋಮ? - Dharwad fish died news

ಬೆಳಗಾವಿಯ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಒಡೆತನದ ಸಕ್ಕರೆ ಕಾರ್ಖಾನೆಯಿಂದ ಕೆಮಿಕಲ್ ಮಿಶ್ರಿತ ನೀರು ಜಿಲ್ಲೆಯ ತುಪ್ಪರಿ ಹಳ್ಳಕ್ಕೆ ಬಂದು ಸೇರುತ್ತಿದೆ. ಇದರಿಂದಲೇ ಹಳ್ಳದಲ್ಲಿರುವ ಸಾವಿರಾರು ಮೀನುಗಳ ಮಾರಣ ಹೋಮವಾಗಿದೆ ಎಂಬ ಆರೋಪಗಳು ಕೇಳಿಬಂದಿವೆ‌.

Dharwad
ತುಪ್ಪರಿ ಹಳ್ಳದಲ್ಲಿ ಮೀನುಗಳ ಸಾವು

By

Published : Jan 19, 2021, 12:52 PM IST

ಧಾರವಾಡ: ಬೆಳಗಾವಿಯ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಒಡೆತನದ ಸಕ್ಕರೆ ಕಾರ್ಖಾನೆಯಿಂದ ಹೊರಬರುತ್ತಿರುವ ಕೆಮಿಕಲ್ ಮಿಶ್ರಿತ ನೀರಿನಿಂದಲೇ ಸಾವಿರಾರು ಮೀನುಗಳು ಮೃತಪಟ್ಟಿವೆ ಎಂಬ ಆರೋಪಗಳು ಕೇಳಿಬಂದಿವೆ.

ಕೆಮಿಕಲ್ ಮಿಶ್ರಿತ ನೀರು ಜಿಲ್ಲೆಯ ತುಪ್ಪರಿ ಹಳ್ಳಕ್ಕೆ ಬಂದು ಸೇರುತ್ತಿದ್ದು, ಇದರ ಪರಿಣಾಮವಾಗಿ ಹಳ್ಳದಲ್ಲಿರುವ ಸಾವಿರಾರು ಮೀನುಗಳ ಮಾರಣ ಹೋಮವಾಗಿದೆ‌. ಇದೇ ಹಳ್ಳದ ನೀರನ್ನು ತುಪ್ಪರಿ ಹಳ್ಳದ ದಂಡೆಯ ರೈತರು ತಮ್ಮ ಜಾನುವಾರುಗಳಿಗೂ ಕುಡಿಸಿದ್ದಾರೆ. ಈ ಕಾರಣಕ್ಕೆ ರೈತರಲ್ಲಿ ಆತಂಕ ವ್ಯಕ್ತವಾಗಿದೆ ಎನ್ನಲಾಗ್ತಿದೆ.

ತುಪ್ಪರಿ ಹಳ್ಳದಲ್ಲಿ ಮೀನುಗಳ ಸಾವು

ಬೆಳಗಾವಿ ಜಿಲ್ಲೆಯ ಸವದತ್ತಿ ಬಳಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್​ ಒಡೆತನದ ಹರ್ಷ ಶುಗರ್ಸ್ ಫ್ಯಾಕ್ಟರಿ ಇದೆ. ಇತ್ತೀಚೆಗಷ್ಟೇ ಈ ಫ್ಯಾಕ್ಟರಿ ಕಬ್ಬು ನುರಿಸಲು ಆರಂಭಿಸಿದ್ದು, ಎರಡು ದಿನಗಳಿಂದ ಫ್ಯಾಕ್ಟರಿಯಿಂದ ಅಪಾರ ಪ್ರಮಾಣದ ಕೆಮಿಕಲ್ ಮಿಶ್ರಿತ ನೀರು ಧಾರವಾಡ ಜಿಲ್ಲೆಯ ತುಪ್ಪರಿಹಳ್ಳವನ್ನು ಸೇರುತ್ತಿದೆ. ಈ ವರ್ಷ ಚೆನ್ನಾಗಿ ಮಳೆ ಆಗಿರುವ ಕಾರಣಕ್ಕೆ ತುಪ್ಪರಿ ಹಳ್ಳದಲ್ಲಿ ನೀರು ಸಹ ಹರಿಯುತ್ತಿದೆ. ಈ ಕೆಮಿಕಲ್ ನೀರು ನೇರವಾಗಿ ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಶಿರೂರ ಮತ್ತು ಆಯಟ್ಟಿ ಭಾಗದಲ್ಲಿ ಸಣ್ಣ ಹಳ್ಳದ ಮೂಲಕ ತುಪ್ಪರಿಹಳ್ಳವನ್ನು ಸೇರುತ್ತಿದ್ದು, ಎರಡೇ ದಿನದಲ್ಲಿ ಸಾವಿರಕ್ಕೂ ಹೆಚ್ಚು ಮೀನುಗಳು ಮೃತಪಟ್ಟಿವೆ.

ABOUT THE AUTHOR

...view details