ಕರ್ನಾಟಕ

karnataka

ETV Bharat / state

ಧಾರವಾಡ; ಕಾಂಗ್ರೆಸ್ ಮುಖಂಡನ ಬರ್ತ್​ಡೇ ಪಾರ್ಟಿಯಲ್ಲಿ ಗುಂಡು ಹಾರಿಸಿದ ಗಂಡು! ವಿಡಿಯೋ... - ಧಾರವಾಡದಲ್ಲಿ ಕಾಂಗ್ರೆಸ್​ ಮುಖಂಡನ ಬರ್ತ್​ಡೇ ಪಾರ್ಟಿಯಲ್ಲಿ ಹಾರಿದ ಗುಂಡು,

ಕಾಂಗ್ರೆಸ್​ ಮುಖಂಡರೊಬ್ಬರ ಜನ್ಮದಿನದ ಪಾರ್ಟಿಯಲ್ಲಿ ಅವರದೇ ಪಕ್ಷದ ಮುಖಂಡರೊಬ್ಬರು ಗಾಳಿಯಲ್ಲಿ ಗುಂಡು ಹಾರಿಸಿ ಶುಭ ಕೋರಿರುವ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ.

Congress leader birthday party, Congress leader birthday party at Dharwad, Firing in Congress leader birthday party at Dharwad, Dharwad crime news, ಕಾಂಗ್ರೆಸ್​ ಮುಖಂಡನ ಬರ್ತ್​ಡೇ ಪಾರ್ಟಿಯಲ್ಲಿ ಹಾರಿದ ಗುಂಡು, ಧಾರವಾಡದಲ್ಲಿ ಕಾಂಗ್ರೆಸ್​ ಮುಖಂಡನ ಬರ್ತ್​ಡೇ ಪಾರ್ಟಿಯಲ್ಲಿ ಹಾರಿದ ಗುಂಡು, ಧಾರವಾಡ ಅಪರಾಧ ಸುದ್ದಿ,
ಕಾಂಗ್ರೆಸ್ ಮುಖಂಡನ ಬರ್ತ್​ಡೇ ಪಾರ್ಟಿಯಲ್ಲಿ ಗುಂಡು ಹಾರಿಸಿದ ಗಂಡು

By

Published : Mar 24, 2021, 12:02 PM IST

ಧಾರವಾಡ:ಕಾಂಗ್ರೆಸ್ ಮುಖಂಡನ ಬರ್ತಡೇಯಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿ ಶುಭ ಕೋರಿದ ಘಟನೆ ಶಿವಳ್ಳಿ ಹಾಗೂ ಹೆಬ್ಬಳ್ಳಿ ಗ್ರಾಮಗಳ ಮಧ್ಯದ ತೋಟವೊಂದರಲ್ಲಿ ನಡೆದಿದೆ.

ರಿವಾಲ್ವರ್‌ನಿಂದ ಗುಂಡು ಹಾರಿಸಿ ಕೈ ಮುಖಂಡರೊಬ್ಬರು ತಮ್ಮ ಪಕ್ಷದ ಮುಖಂಡರಾದ ಅಣ್ಣಪ್ಪಗೌಡರಿಗೆ ಜನ್ಮದಿನದ ಶುಭ ಕೋರಿದ್ದಾರೆ.

ಓದಿ:ದೇಶಕ್ಕಾಗಿ ಚಿನ್ನ ಗೆದ್ದು ವಿಶ್ವ ದಾಖಲೆ ನಿರ್ಮಿಸಿದ 19ರ ಶೂಟರ್ ನರ್ವಾಲ್​​!

ತಾಪಂ ಮಾಜಿ ಸದಸ್ಯ ಅಣ್ಣಪ್ಪಗೌಡ ಚಿನಗುಡಿ ಅವರ ಬರ್ತಡೇ ಪಾರ್ಟಿಯನ್ನು ತೋಟವೊಂದರಲ್ಲಿ ಏರ್ಪಡಿಸಲಾಗಿತ್ತು. ಪಾರ್ಟಿಗೆ ಆಗಮಿಸಿದ ಕಾಂಗ್ರೆಸ್​ ಮುಖಂಡ ಮಲ್ಲಿಕಾರ್ಜುನ ಆಯಟ್ಟಿ ಗಾಳಿಯಲ್ಲಿ ಗುಂಡು ಹಾರಿಸಿ ಶುಭ ಕೋರಿದ್ದಾರೆ.

ಕಾಂಗ್ರೆಸ್ ಮುಖಂಡನ ಬರ್ತ್​ಡೇ ಪಾರ್ಟಿಯಲ್ಲಿ ಗುಂಡು ಹಾರಿಸಿದ ಗಂಡು

ಗುಂಡು ಹಾರಿಸಿದ ಬಳಿಕ ಮಲ್ಲಿಕಾರ್ಜುನ ಅಣ್ಣಪ್ಪಗೌಡರಿಗೆ ರಿವಲ್ವಾರ್ ಪಾಯಿಂಟ್ ಇಟ್ಟು ಶುಭ ಹಾರೈಸಿದ್ದಾರೆ. ಈ ಎಲ್ಲ ದೃಶ್ಯ ಮೊಬೈಲ್​ವೊಂದರಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಈಗ ನಗರದಲ್ಲಿ ಭಾರೀ ಸಂಚಲನ ಮೂಡಿಸುತ್ತಿದೆ.

ಓದಿ:ಮಂಡ್ಯ: ಕೊಂಡ ಹಾಯುವಾಗ ಆಯತಪ್ಪಿ ಬಿದ್ದ ಪೂಜಾರಿ, ಗಂಭೀರ ಗಾಯ

ಈ ಘಟನೆ ಧಾರವಾಡ ಗ್ರಾಮೀಣ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ABOUT THE AUTHOR

...view details