ಕರ್ನಾಟಕ

karnataka

ETV Bharat / state

ಧಾರವಾಡ: ಬಾವಿಗೆ ಬಿದ್ದಿದ್ದ ವೃದ್ಧೆ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ - old lady drowned into the well in Dharwad

ಬಾವಿಯ ಕೆಸರಿನಲ್ಲಿ ಸಿಲುಕಿಕೊಂಡಿದ್ದ ವೃದ್ಧೆಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿರುವ ಘಟನೆ ಮಾಳಮಡ್ಡಿ ಬಡಾವಣೆಯಲ್ಲಿ ನಡೆದಿದೆ.

dharwad
: ಬಾವಿಗೆ ಬಿದ್ದಿದ್ದ ವೃದ್ದೆಯ ರಕ್ಷಣೆ

By

Published : Feb 9, 2021, 7:43 PM IST

Updated : Feb 9, 2021, 8:09 PM IST

ಧಾರವಾಡ: 50 ಅಡಿ ಆಳದ ಬಾವಿಯ ಕೆಸರಿನಲ್ಲಿ ಸಿಲುಕಿಕೊಂಡಿದ್ದ ವೃದ್ಧೆಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಈ ಘಟನೆ ಮಾಳಮಡ್ಡಿ ಬಡಾವಣೆಯಲ್ಲಿ ನಡೆದಿದೆ.

ವನಮಾಲಾ‌ ಕುಲಕರ್ಣಿ ಬಾವಿಗೆ ಬಿದ್ದಿದ್ದ ವೃದ್ಧೆ. ಇವರು ಮಧ್ಯಾಹ್ನದಿಂದಲೇ ಮನೆಯಿಂದ ನಾಪತ್ತೆಯಾಗಿದ್ದರು ಎನ್ನಲಾಗಿದೆ. ಸದ್ಯ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಬಾವಿಗೆ ಬಿದ್ದಿದ್ದ ವೃದ್ದೆಯ ರಕ್ಷಣೆ

ಮಂಜುನಾಥ್ ಎಂಬ ಬಾಲಕ ಬಾವಿಯಲ್ಲಿ ಇಣುಕಿ ನೋಡಿದಾಗ, ವೃದ್ಧೆ ಬಾವಿಗೆ ಬಿದ್ದಿರುವುದು ಬೆಳಕಿಗೆ ಬಂದಿದೆ. ತಕ್ಷಣ ಇಲಾಖೆಗೆ ಮಾಹಿತಿ ತಿಳಿಸಿದ್ದು, ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ರಕ್ಷಣೆ ಮಾಡಿದ್ದಾರೆ.

Last Updated : Feb 9, 2021, 8:09 PM IST

ABOUT THE AUTHOR

...view details