ಹುಬ್ಬಳ್ಳಿ:ಪೀಠೋಪಕರಣ ತಯಾರಿಕೆ ಘಟಕದಲ್ಲಿ ಅಗ್ನಿ ಅವಘಡದಲ್ಲಿ ಲಕ್ಷಾಂತರ ಮೌಲ್ಯದ ಕಟ್ಟಿಗೆಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ಗೋಕುಲ ರಸ್ತೆಯಲ್ಲಿರುವ ಶಾಪ್ನಲ್ಲಿ ಸಂಭವಿಸಿದೆ.
ಪ್ರಕಾಶ ಇರಕಲ್ ಎಂಬುವರಿಗೆ ಸೇರಿದ ಫರ್ನಿಚರ್ ಗ್ರೇಸ್ ಘಟಕದಲ್ಲಿ ಬೆಂಕಿ ಅವಘಡ ಸಂಭಸಿದ್ದು, ಬೆಳಗ್ಗೆ 7.45 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ 42 ಲಕ್ಷ ಮೌಲ್ಯದ ಕಟ್ಟಿಗೆಗಳು ಬೆಂಕಿಗೆ ಆಹುತಿಯಾಗಿವೆ ಎಂದು ತಿಳಿದು ಬಂದಿದೆ.