ಹುಬ್ಬಳ್ಳಿ:ನಿಲ್ಲಿಸಿದ ಗುಜರಿ ವಾಹನಗಳಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಹೊತ್ತಿ ಉರಿದ ಘಟನೆ ತಾಲೂಕಿನ ವರೂರ ಬಳಿಯ ವಿಆರ್ಎಲ್ ಕಂಪನಿ ಆವರಣದಲ್ಲಿ ನಡೆದಿದೆ.
ವಿಆರ್ಎಲ್ ಕಂಪನಿಯ ಗುಜರಿ ವಾಹನಗಳಿಗೆ ಬೆಂಕಿ: ತಪ್ಪಿದ ಭಾರಿ ಅನಾಹುತ - ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ
ನಿಲ್ಲಿಸಿದ ಗುಜರಿ ವಾಹನಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಕೆಲ ಬಸ್ಗಳ ಮುಂಭಾಗ ಸುಟ್ಟು ಕರಕಲಾಗಿದೆ.
ವಿಆರ್ಎಲ್ ಕಂಪನಿಯ ಸ್ಕ್ರಾಫ್ ವಾಹನಗಳಿಗೆ ಬೆಂಕಿ
ಕಂಪನಿಯ ಗುಜರಿ ವಾಹನಗಳನ್ನು ಬೇರೆಯವರಿಗೆ ಟೆಂಡರ್ ಕೊಡಲಾಗುವುದು. ಈ ವೇಳೆ ಕೆಲಸಗಾರರು ವಾಹನಗಳನ್ನು ಸ್ಪಾರ್ಕ್ ಮೂಲಕ ಕಟ್ ಮಾಡಿ ಹೊರಗೆ ಹೋದಾಗ, ಅಲ್ಲಿಯೇ ಬಿದ್ದ ಬೆಂಕಿಯ ತುಣುಕು ಟಯರ್ ಟೂಬ್ಗೆ ತಗುಲಿದೆ ಎಂದು ತಿಳಿದು ಬಂದಿದೆ.
ಸಣ್ಣದಾಗಿ ಕಾಣಿಸಿಕೊಡ ಬೆಂಕಿ ಏಕಾಏಕಿ ಬೃಹತ್ ಗಾತ್ರದಲ್ಲಿ ವ್ಯಾಪಿಸಿದೆ. ಘಟನೆಯಲ್ಲಿ ಕೆಲವೊಂದು ಹಳೆಯ ಬಸ್ಗಳ ಮುಂಭಾಗ ಸುಟ್ಟು ಕರಕಲಾಗಿದೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ.