ಬೆದರಿಸಿ ಚಿನ್ನಾಭರಣ ಕಿತ್ತುಕೊಂಡ ಆರೋಪ: ಹುಬ್ಬಳ್ಳಿಯಲ್ಲಿ ಇನ್ಸ್ಪೆಕ್ಟರ್ ವಿರುದ್ಧವೇ ಎಫ್ಐಆರ್! - case registered against inspector prabhu surin
ಹುಬ್ಬಳ್ಳಿಯಲ್ಲಿ ನಿವೃತ್ತ ನೌಕರರೋರ್ವರಿಗೆ ಜೀವ ಭಯ ಹುಟ್ಟಿಸಿ ಸುಮಾರು ಒಂದು ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಕಿತ್ತುಕೊಂಡ ಆರೋಪದ ಮೇಲೆ ಇನ್ಸ್ಪೆಕ್ಟರ್ ವಿರುದ್ಧವೇ ಎಫ್ಐಆರ್ ದಾಖಲಾಗಿದೆ.
ಇನ್ಸ್ಪೆಕ್ಟರ್ ವಿರುದ್ಧ ಎಫ್ಐಆರ್
ಹುಬ್ಬಳ್ಳಿ:ನವನಗರದ ನಿವೃತ್ತ ನೌಕರರೋರ್ವರಿಗೆ ಜೀವ ಭಯ ಹುಟ್ಟಿಸಿ ಸುಮಾರು ಒಂದು ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಕಿತ್ತುಕೊಂಡಿದ್ದಾರೆ ಎಂದು ಎಪಿಎಂಸಿ ಠಾಣೆಯಲ್ಲೇ ಅಲ್ಲಿನ ಇನ್ಸ್ಪೆಕ್ಟರ್ ವಿರುದ್ಧವೇ ಪ್ರಕರಣ ದಾಖಲಾಗಿದೆ.
ಚಿನ್ನಾಭರಣ ಕಿತ್ತುಕೊಂಡ ಬಗ್ಗೆ ಪದೇ ಪದೆ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೂ ಪ್ರಕರಣವನ್ನ ದಾಖಲಿಸಿಕೊಂಡಿಲ್ಲವಂತೆ. ಹೀಗಾಗಿ ಓಂಕಾರಗೌಡ ಪಾಟೀಲ, 3ನೇ ಜೆಎಂಎಫ್ಸಿ ನ್ಯಾಯಾಲಯಕ್ಕೆ ದೂರು ನೀಡಿದ್ದರು. ಈ ಬಗ್ಗೆ ನ್ಯಾಯಾಲಯ ದೂರು ದಾಖಲಿಸಿಕೊಳ್ಳುವಂತೆ ತಿಳಿಸಿದ್ದರಿಂದ ಇನ್ಸ್ಪೆಕ್ಟರ್ ಪ್ರಭು ಸೂರಿನ್ ಸೇರಿದಂತೆ ಮೂವರ ವಿರುದ್ಧ ಪಿಎಸ್ಐ ಎಸ್.ಎಸ್. ಜಕ್ಕನಗೌಡ ದೂರು ದಾಖಲಿಸಿಕೊಂಡಿದ್ದಾರೆ.
ಎಪಿಎಂಸಿ ಠಾಣೆಯಲ್ಲಿಯೇ ದೂರು ದಾಖಲಾಗಿದ್ದು, ಅದೇ ಠಾಣೆಯಲ್ಲಿ ಇನ್ಸಪೆಕ್ಟರ್ ಆಗಿರುವುದರಿಂದ ತನಿಖೆ ಯಾವ ರೀತಿ ನಡೆಯುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.