ಕರ್ನಾಟಕ

karnataka

ETV Bharat / state

ಕರ್ತವ್ಯನಿರತ ಪೊಲೀಸ್ ಮೇಲೆ ಹಲ್ಲೆ : 9 ಜನರ ಮೇಲೆ ಎಫ್ಐಆರ್ - ಈಟಿವಿ ಭಾರತ ಕನ್ನಡ

ರಸ್ತೆ ಬಂದ್ ಮಾಡಬೇಡಿ, ವಾಹನ ಸಂಚಾರಕ್ಕೆ ಅಡೆತಡೆ ಉಂಟಾಗುತ್ತದೆ ಎಂದು ಬುದ್ಧಿ ಹೇಳಿದ್ದಕ್ಕೆ ಪೊಲೀಸ್​ ಮೇಲೆ ಹಲ್ಲೆ ನಡೆದಿದೆ. ಕರ್ತವ್ಯನಿರತ ಪೊಲೀಸ್ ಮೇಲೆ ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ಎಫ್​ಐಆರ್​ ದಾಖಲು ಮಾಡಲಾಗಿದೆ.

fir-against-9-people-in-dharwad
ಕರ್ತವ್ಯನಿರತ ಪೊಲೀಸ್ ಮೇಲೆ ಹಲ್ಲೆ : 9 ಜನರ ಮೇಲೆ ಎಫ್ಐಆರ್

By

Published : Aug 27, 2022, 4:32 PM IST

ಧಾರವಾಡ:ಕರ್ತವ್ಯನಿರತ ಪೊಲೀಸ್ ಮೇಲೆ ಹಲ್ಲೆ ಮಾಡಿದ ಆರೋಪದಡಿ 9 ಜನರ ಮೇಲೆ ಧಾರವಾಡ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಧಾರವಾಡ ತಾಲೂಕಿನ ಚಂದನಮಟ್ಟಿ ಗ್ರಾಮದಲ್ಲಿ ಚಕ್ಕಡಿ ಓಡಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ವೇಳೆ ಕೆಲವರು ರಸ್ತೆ ಬಂದ್ ಮಾಡಿದ್ದರು. ಆಗ ಸ್ಥಳಕ್ಕೆ ತೆರಳಿದ ಗ್ರಾಮೀಣ ಠಾಣೆ ಪೊಲೀಸ್​​ ಕಾನ್ಸ್​ಟೇಬಲ್​ ಚಿದಾನಂದ ಅಬ್ಬಿಗೇರಿ ಅವರು ರಸ್ತೆ ಬಂದ್ ಮಾಡಬೇಡಿ, ವಾಹನ ಸಂಚಾರಕ್ಕೆ ಅಡೆತಡೆ ಉಂಟಾಗುತ್ತದೆ ಎಂದು ಬುದ್ಧಿ ಹೇಳಿದ್ದಾರೆ. ಅಷ್ಟಕ್ಕೇ ಸಿಟ್ಟಿಗೆದ್ದ 9 ಜನರಿದ್ದ ಗುಂಪು ಕಾನ್ಸ್​ಟೇಬಲ್ ಮೇಲೆ ಏಕಾಏಕಿ ತೀವ್ರ ಹಲ್ಲೆ ನಡೆಸಿತ್ತು.

ಅಲ್ಲದೆ ಕಾನ್ಸ್​ಟೇಬಲ್ ಬೈಕ್‌ನ್ನೂ ಚರಂಡಿಗೆ ತಳ್ಳಲಾಗಿತ್ತು. ಈ ಸಂಬಂಧ ಶಂಕರ ಮೊರಬದ, ಶಿವರಾಜ ಮೊರಬದ, ನಾಗರಾಜ ಮೊರಬದ, ಹರೀಶ ಮುದಕಾಯಿ, ಸಹದೇವ ಚಿನ್ನಣ್ಣವರ, ಮಹಾಂತೇಶ ಕುಡೇಕರ, ಗಿರೀಶ ದೇಸಾಯಿ, ರಾಜು ಪಿರೋಜಿ, ಪ್ರಕಾಶ ಹುಲ್ಲಂಬಿ ಎಂಬುವವರ ಮೇಲೆ ಜಾತಿ ನಿಂದನೆ ಹಾಗೂ ಕರ್ತವ್ಯನಿರತ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಬಗ್ಗೆ ಧಾರವಾಡ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಸಿನಿಮಾ ಶೈಲಿಯಲ್ಲಿ ದರೋಡೆ.. ನಕಲಿ ಬೆಂಗಳೂರು ಇಡಿ ಗುಂಪಿಗೆ ಬಿದ್ವು ಧರ್ಮದೇಟು

ABOUT THE AUTHOR

...view details