ಕರ್ನಾಟಕ

karnataka

ETV Bharat / state

ಧಾರವಾಡ: ಸೇವಾ ನ್ಯೂನತೆ ಎಸಗಿದ್ದಕ್ಕಾಗಿ ಗೋಲ್ಡ್ ಪ್ಯಾಲೇಸ್​ಗೆ ದಂಡ - ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ

ಸೇವಾ ನ್ಯೂನತೆ ಎಸಗಿದ್ದಕ್ಕಾಗಿ ಲಕ್ಷ್ಮೀ ಗೋಲ್ಡ್ ಪ್ಯಾಲೇಸ್​ಗೆ ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ದಂಡ ವಿಧಿಸಿದೆ.

ಧಾರವಾಡ
dharwad

By

Published : Oct 14, 2022, 7:30 AM IST

ಧಾರವಾಡ: ಸೇವಾ ನ್ಯೂನತೆ ಎಸಗಿದ ಲಕ್ಷ್ಮೀ ಗೋಲ್ಡ್ ಪ್ಯಾಲೇಸ್​ಗೆ ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ದಂಡ ವಿಧಿಸಿ, ಗ್ರಾಹಕನಿಗೆ ನೀಡುವಂತೆ ಆದೇಶಿಸಿದೆ.

ಹುಬ್ಬಳ್ಳಿ ನಗರದ ನಿವಾಸಿ ಬಾಳಕೃಷ್ಣ ಇಜಂತಕರವರು ಹೊಸ ಯೋಜನೆಯಡಿ ಸೆಪ್ಟೆಂಬರ್‌ 15, 2019 ರಿಂದ ಅಕ್ಟೋಬರ್ 6, 2020 ರವರೆಗೆ ಒಟ್ಟು 19 ಕಂತುಗಳಲ್ಲಿ 1,56,000 ರೂ. ಕಟ್ಟಿದ್ದರು. ಹಣಕ್ಕೆ ಸಮಾನಾಂತರವಾಗಿ ಒಟ್ಟು 45.709 ಗ್ರಾಂ. ಬಂಗಾರವನ್ನು ಯೋಜನಾ ಅವಧಿ ಮುಕ್ತಾಯವಾದರೂ ಯೋಜನೆಯ ನಿಯಮಾನುಸಾರ ತನಗೆ ಬಂಗಾರ ಹಿಂದಿರುಗಿಸದೇ ಸತಾಯಿಸಿ ಸೇವಾ ನ್ಯೂನತೆ ಎಸಗಿರುತ್ತಾರೆ ಎಂದು ಹುಬ್ಬಳ್ಳಿಯ ಲಕ್ಷ್ಮೀ ಗೋಲ್ಡ್ ಪ್ಯಾಲೇಸ್​ ವಿರುದ್ಧ ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಇದನ್ನೂ ಓದಿ:ಧಾರವಾಡ: ಕನ್ನಡದಲ್ಲಿ ಬರೆದ ಚೆಕ್ ಅಮಾನ್ಯಗೊಳಿಸಿದ ಬ್ಯಾಂಕಿಗೆ 85 ಸಾವಿರ ರೂ. ದಂಡ

ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ, ಭೂತೆ ಹಾಗೂ ವಿ.ಅ. ಬೋಳಶೆಟ್ಟಿ ಮತ್ತು ಪಿ.ಸಿ.ಹಿರೇಮಠ ಸದಸ್ಯರು ಯೋಜನೆಯ ಒಪ್ಪಂದದಂತೆ ದೂರುದಾರರಿಂದ ಹಣ ಪಡೆದು ಅದಕ್ಕೆ ಸಮಾನಾಂತರ ಮೌಲ್ಯದ ಬಂಗಾರ ಕೊಡದೇ ಲಕ್ಷ್ಮೀ ಗೋಲ್ಡ್ ಪ್ಯಾಲೇಸ್​ನವರು ಗ್ರಾಹಕನಿಗೆ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ತೀರ್ಪು ನೀಡಿದ್ದಾರೆ. ಅಗತ್ಯವಿರುವ ಹೆಚ್ಚಿನ ಹಣ ಪಡೆದು ಅರ್ಜಿದಾರರನಿಗೆ 45.709 ಗ್ರಾಂ ತೂಕದ 24 ಕ್ಯಾರೆಟ್​ ಚಿನ್ನ ನೀಡುವಂತೆ ಹಾಗೂ ಸೇವಾ ನ್ಯೂನ್ಯತೆ ಎಸಗಿದ್ದಕ್ಕಾಗಿ ತೊಂದರೆ ಹಾಗೂ ಮಾನಸಿಕ ಹಿಂಸೆಗೆ 25 ಸಾವಿರ ಪರಿಹಾರ ಹಾಗೂ 10 ಸಾವಿರ ಪ್ರಕರಣದ ಖರ್ಚು ವೆಚ್ಚ ನೀಡಬೇಕು ಎಂದು ತೀರ್ಪು ನೀಡಿ ಆದೇಶಿಸಿದ್ದಾರೆ.

ABOUT THE AUTHOR

...view details