ಹುಬ್ಬಳ್ಳಿ:ಉತ್ತರ ಕರ್ನಾಟಕ ನೆರೆ ಸಂತ್ರಸ್ತ ಕುಟುಂಬಗಳಿಗೆ ಪ್ರಜಾಕೀಯ ಪಕ್ಷದ ವತಿಯಿಂದ ತಲಾ ಐದು ಸಾವಿರ ರೂಪಾಯಿ ಧನ ಸಹಾಯ ನೀಡಲಾಯಿತು.
ಉತ್ತರ ಕರ್ನಾಟಕ ನೆರೆ ಸಂತ್ರಸ್ತ ಕುಟುಂಬಗಳಿಗೆ ಉಪ್ಪಿ ಅಭಿಮಾನಿಯಿಂದ ನೆರವು - Financial Assistance From Prajakeeya to Ramadurga Flood Victims
ಉತ್ತರ ಕರ್ನಾಟಕ ನೆರೆ ಸಂತ್ರಸ್ತ ಕುಟುಂಬಗಳಿಗೆ ಪ್ರಜಾಕೀಯ ಪಕ್ಷದ ವತಿಯಿಂದ ತಲಾ ಐದು ಸಾವಿರ ರೂಪಾಯಿ ಧನ ಸಹಾಯ ನೀಡಲಾಯಿತು.
ರಾಮದುರ್ಗದ ನೆರೆ ಸಂತ್ರಸ್ತ ಮಹಿಳೆ ಪಾರ್ವತಮ್ಮ ರಾವಳ ಹಾಗೂ ಇನ್ನೊಂದು ಸಂತ್ರಸ್ತ ಕುಟುಂಬಕ್ಕೆ ಬೆಂಗಳೂರಿನಿಂದ ಆಗಮಿಸಿದ ಉಪೇಂದ್ರ ಅಭಿಮಾನಿ ನಾಗರಾಜ ಎಚ್.ಟಿ ಧನ ಸಹಾಯದ ಚೆಕ್ ವಿತರಿಸಿದರು.
ಬಳಿಕ ಮಾತಾನಾಡಿ, ಉಪೇಂದ್ರ ಹುಟ್ಟು ಹಬ್ಬದ ಪ್ರಯುಕ್ತ ಮನೆಗೆ ಕೇಕ್ ತೆಗೆದುಕೊಂಡು ಹೋದಾಗ, ಅವರು ನನ್ನ ಹುಟ್ಟು ಹಬ್ಬದ ಪ್ರಯುಕ್ತ ನೆರೆ ಸಂತ್ರಸ್ತರಿಗೆ ಸಹಾಯ ಮಾಡುವಂತೆ ಹೇಳಿದ್ದರು, ಅದರಂತೆ ನಾವು ಬೆಂಗಳೂರಿನಿಂದ ಹುಬ್ಬಳ್ಳಿಗೆ ಆಗಮಿಸಿ ಧನ ಸಹಾಯ ನೀಡಿದ್ದೇವೆ ಎಂದರು. ಈ ಸಂದರ್ಭದಲ್ಲಿ ಸಿದ್ದಾರೂಢ ಸಪಾರೆ, ತಿಪ್ಪಣ್ಣ ಲಚ್ಚಂಪುರ, ಸಂತೋಷ ನಂದುರ, ನಿಂಗಪ್ಪ ರಾವಳ ಸೇರಿದಂತೆ ಇತರರು ಇದ್ದರು.