ಹುಬ್ಬಳ್ಳಿ: ಲಾಕ್ಡೌನ್ ಅವಧಿಯಲ್ಲಿ ದೇಶದಾದ್ಯಂತ ಅನೇಕ ವ್ಯಾಪಾರ ವಹಿವಾಟುಗಳು ನಷ್ಟಕ್ಕೆ ಸಿಲುಕಿವೆ. ಅದರಂತೆ ಮನೋರಂಜನಾ ತಾಣವಾದ ಚಿತ್ರಮಂದಿರಕ್ಕೆ ಕೊರೊನಾ ಬಹುದೊಡ್ಡ ಹೊಡೆತ ಕೊಟ್ಟಿದೆ. ಪರಿಣಾಮ ಚಿತ್ರಮಂದಿರ ನಂಬಿ ಜೀವನ ನಡೆಸುತ್ತಿದ್ದ ಮಾಲೀಕರು ಹಾಗೂ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
6 ತಿಂಗಳಿಂದ ಥಿಯೇಟರ್ಗಳು ಬಂದ್... ಸಾಲ ಮಾಡಿ ವೇತನ ನೀಡುತ್ತಿರುವ ಮಾಲೀಕರು - Theater Owners Association
ಕೊರೊನಾದಿಂದಾಗಿ ಚಿತ್ರಮಂದಿರವನ್ನು ಸರ್ಕಾರ ಸಂಪೂರ್ಣ ಬಂದ್ ಮಾಡಿದೆ. ಇದೀಗ ಚಿತ್ರಮಂದಿರಗಳು ಬಂದ್ ಆಗಿ ಬರೋಬ್ಬರಿ 6 ತಿಂಗಳು ಕಳೆಯುತ್ತಾ ಬಂದಿದೆ. ಪರಿಣಾಮ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಹೀಗಾಗಿ ಈಗಲಾದರೂ ಚಿತ್ರಮಂದಿರ ಆರಂಭಕ್ಕೆ ಸರ್ಕಾರ ಮುಂದಾಗಬೇಕು ಎಂಬುದು ಮಾಲೀಕರ ಹಾಗೂ ಕಾರ್ಮಿಕರ ಒತ್ತಾಯವಾಗಿದೆ.
ಹೌದು, ಕೊರೊನಾದಿಂದಾಗಿ ಚಿತ್ರಮಂದಿರವನ್ನು ಸರ್ಕಾರ ಸಂಪೂರ್ಣ ಬಂದ್ ಮಾಡಿದೆ. ಇದೀಗ ಚಿತ್ರಮಂದಿರಗಳು ಬಂದ್ ಆಗಿ ಬರೋಬ್ಬರಿ 6 ತಿಂಗಳು ಕಳೆಯುತ್ತಾ ಬಂದಿದೆ. ಪರಿಣಾಮ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಅದರಂತೆ ಹುಬ್ಬಳ್ಳಿ-ಧಾರವಾಡದಲ್ಲಿರುವ ಬಹುತೇಕ ಚಿತ್ರಮಂದಿರದ ಮಾಲೀಕರ ಬದುಕು ಸಂಕಷ್ಟಕ್ಕೆ ಸಿಲುಕಿದ್ದು, ಬೇರೆ ವಲಯಗಳಿಗೆ ಅನುಮತಿ ನೀಡಿದಂತೆ ಚಿತ್ರಮಂದಿರಗಳಿಗೆ ಅನುಮತಿ ನೀಡಬೇಕೆಂದು ಚಿತ್ರಮಂದಿರಗಳ ಮಾಲೀಕರು ಮನವಿ ಮಾಡಿದ್ದಾರೆ.
ಇನ್ನೂ ಕೇಂದ್ರ ಸರ್ಕಾರ ಲಾಕ್ಡೌನ್ 4.0 ತೆರವಿನ ಹೆಸರಲ್ಲಿ ಹಲವಾರು ಕ್ಷೇತ್ರಗಳಿಗೆ ಅನುಮತಿ ನೀಡಿದ್ದು, ಅದರಂತೆ ಮುಂಜಾಗೃತಾ ಕ್ರಮಗಳನ್ನು ಕೈಗೊಂಡು ವಿವಿಧ ಕ್ಷೇತ್ರಗಳು ಕಾರ್ಯನಿರ್ವಹಿಸುತ್ತಿವೆ. ಅದೇ ರೀತಿ ಚಿತ್ರಮಂದಿರ ಸಹ ಕಾರ್ಯ ನಿರ್ವಹಿಸಲು ಅನುಮತಿ ನೀಡಬೇಕು. ಕೊರೊನಾದಿಂದ ಕನ್ನಡ ಚಿತ್ರರಂಗ ಹಾಗೂ ಪೋಸ್ಟರ್ ಮ್ಯಾನ್, ನಟ ನಟಿಯರು, ಸಿನಿಮಾ ಹಂಚಿಕೆದಾರರಿಗೂ ಸಹ ಹೊಡೆತ ಬಿದ್ದಿದೆ. ಹೀಗಾಗಿ ಸರ್ಕಾರ ಆದಷ್ಟು ಬೇಗ ಚಿತ್ರಮಂದಿರಗಳನ್ನು ಆರಂಭ ಮಾಡಬೇಕೆಂಬ ಒತ್ತಾಯ ಕೇಳಿಬರುತ್ತಿದೆ.