ಹುಬ್ಬಳ್ಳಿ:ಉಮಚಗಿ ಗ್ರಾಮದಲ್ಲಿ ಜಮೀನು ವ್ಯಾಜ್ಯಕ್ಕಾಗಿ ಎರಡು ಕುಟುಂಬಗಳ ಮಧ್ಯೆ ಮಾರಾಮಾರಿ ನಡೆದಿದೆ. ಗ್ರಾಮದ ವೀರನಗೌಡ ಪಾಟೀಲ್ ಹಾಗೂ ಬಸವರಾಜ ಮಡಿವಾಳರ ಕುಟುಂಬಗಳ ಮಧ್ಯೆ ಕಳೆದ ಮೂರು ತಿಂಗಳಿಂದ ಎರಡು ಮಧ್ಯೆ ಆಗಾಗ್ಗೆ ಗಲಾಟೆ ನಡೆಯುತ್ತಿತ್ತು.
ಜಮೀನು ವ್ಯಾಜ್ಯಕ್ಕಾಗಿ ಎರಡು ಕುಟುಂಬಗಳ ಮಧ್ಯೆ ಮಾರಾಮಾರಿ
ಜಮೀನಿಗಾಗಿ ಎರಡು ಕುಟುಂಬಗಳ ಮಧ್ಯೆ ಜಗಳ ನಡೆದಿದೆ. ಪರಸ್ಪರ ಹೊಡೆದಾಡಿಕೊಂಡಿದ್ದು, ವೀರನಗೌಡ ಪಾಟೀಲ ಅವರ ಕೈಗೆ ಹಲ್ಲೆ ಮಾಡಲಾಗಿದೆ.
ಜಮೀನು ವ್ಯಾಜ್ಯಕ್ಕಾಗಿ ಎರಡು ಕುಟುಂಬಗಳ ಮಧ್ಯೆ ಮಾರಾಮಾರಿ
ನಿರಂತರ ಜಗಳಕ್ಕೆ ಬೇಸತ್ತು 20 ದಿನ ವೀರನಗೌಡರ ಪುತ್ರ ರಾಯನಗೌಡ ಮನೆ ತೊರೆದಿದ್ದರು. ಆದರೆ ನಿನ್ನೆ ರಾಯನಗೌಡ ಗ್ರಾಮಕ್ಕೆ ಬರುತ್ತಿದ್ದಂತೆ ಬಸವರಾಜ ಕುಟುಂಬಸ್ಥರು ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದರು.
ವೀರನಗೌಡ ಪಾಟೀಲ ಕೈಗೆ ಕೊಡಲಿ ಹಾಗೂ ದೊಣ್ಣೆಯಿಂದ ಹಲ್ಲೆ ಮಾಡಲಾಗಿದೆ. ಕೊಡಲಿಯಿಂದ ಹೊಡೆದಿದ್ದಕ್ಕೆ ವೀರನಗೌಡ ಪಾಟೀಲ್ ಕೈಗೆ ತೀವ್ರ ಗಾಯಗಳಾಗಿದ್ದು, ಹಲ್ಲೆಗೊಳಗಾದ ವೀರನಗೌಡ ಪಾಟೀಲ್ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಸಂಬಂಧ ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ಎರಡು ಕುಟುಂಬದಿಂದ ದೂರು ಪ್ರತಿದೂರು ದಾಖಲಾಗಿವೆ.
TAGGED:
ಕೊಡಲಿ ಹಾಗೂ ದೊಣ್ಣೆಯಿಂದ ಹಲ್ಲೆ