ಕರ್ನಾಟಕ

karnataka

ETV Bharat / state

ಹುಸಿಯಾದ ನಿರೀಕ್ಷೆ : ಗ್ರಾಹಕರಿಲ್ಲದೆ ಮಾಲ್​​ಗಳು ಖಾಲಿ ಖಾಲಿ - ಕೊರೊನಾ ಎಫೆಕ್ಟ್​​

ಲಾಕ್‌ಡೌನ್ ಸಡಿಲಗೊಂಡು ಬಹುತೇಕ ವ್ಯಾಪಾರ-ವಹಿವಾಟು ಚಟುವಟಿಕೆಗಳು ಸಹಜ ಸ್ಥಿತಿಗೆ ಬಂದಿರುವುದರಿಂದ ನಗರದ ಬಹುತೇಕ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಕಂಡು ಬಂತು. ಆದ್ರೆ, ಮಾಲ್‌ಗಳ ಮೇಲೆ ಇಟ್ಟ ನಿರೀಕ್ಷೆ ಹುಸಿಯಾಗಿದ್ದು, ಮುಂದಿನ ದಿನಗಳಲ್ಲಿ ಗ್ರಾಹಕರ ಆಗಮನದ ನಿರೀಕ್ಷೆಯಲ್ಲಿ ವ್ಯಾಪಾರಸ್ಥರಿದ್ದಾರೆ..

Few people are coming to Shopping malls
ಗ್ರಾಹಕರಿಲ್ಲದೆ ಮಾಲ್​​ಗಳು ಖಾಲಿ ಖಾಲಿ

By

Published : Jul 7, 2021, 2:57 PM IST

ಹುಬ್ಬಳ್ಳಿ :ಅನ್​ಲಾಕ್​​ 3.0 ಘೋಷಣೆ ಮಾಡಿ ಶಾಪಿಂಗ್​ ಮಾಲ್​ಗಳನ್ನು ತೆರೆಯಲು ಅವಕಾಶ ಮಾಡಿ ಕೊಡಲಾಗಿದೆ. ಆದರೆ, ಮಳಿಗೆಗಳಲ್ಲಿ ಬೆರಳೆಣಿಕೆಯಷ್ಟು ಗ್ರಾಹಕರು ಮಾತ್ರ ಕಂಡು ಬಂದರು.

ಶಾಪಿಂಗ್​ ಮಾಲ್

ಸರ್ಕಾರದ ನಿಯಮದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಮಾಲ್​ಗಳ ಪ್ರವೇಶ ದ್ವಾರದಲ್ಲೇ ಗ್ರಾಹಕರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿ, ಕೈಗಳಿಗೆ ಸ್ಯಾನಿಟೈಸರ್ ಸಿಂಪಡಿಸಿ ಒಳಕ್ಕೆ ಬಿಡಲಾಗುತ್ತಿತ್ತು. ಕೆಲ ಮಳಿಗೆಗಳಲ್ಲೂ ಸ್ವಚ್ಛತಾ ಕಾರ್ಯ ನಡೆಯುತ್ತಿದ್ದರಿಂದ ವ್ಯಾಪಾರ ಇರಲಿಲ್ಲ. ಮಾಲ್ ತೆರೆದ್ರೂ ಗ್ರಾಹಕರ ಕೊರತೆ ಎದ್ದು ಕಾಣುತ್ತಿದೆ. ಆದರೆ, ಮಠ, ದೇವಸ್ಥಾನ, ಬಸ್ ನಿಲ್ದಾಣ ಸೇರಿದಂತೆ ಹಲವೆಡೆ ಜನಟ್ಟಣೆ ಇದೆ.‌

ಶಾಪಿಂಗ್​ ಮಾಲ್

ಲಾಕ್‌ಡೌನ್ ಸಡಿಲಗೊಂಡು ಬಹುತೇಕ ವ್ಯಾಪಾರ-ವಹಿವಾಟು ಚಟುವಟಿಕೆಗಳು ಸಹಜ ಸ್ಥಿತಿಗೆ ಬಂದಿರುವುದರಿಂದ ನಗರದ ಬಹುತೇಕ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಕಂಡು ಬಂತು. ಆದ್ರೆ, ಮಾಲ್‌ಗಳ ಮೇಲೆ ಇಟ್ಟ ನಿರೀಕ್ಷೆ ಹುಸಿಯಾಗಿದ್ದು, ಮುಂದಿನ ದಿನಗಳಲ್ಲಿ ಗ್ರಾಹಕರ ಆಗಮನದ ನಿರೀಕ್ಷೆಯಲ್ಲಿ ವ್ಯಾಪಾರಸ್ಥರಿದ್ದಾರೆ.

ABOUT THE AUTHOR

...view details