ಹುಬ್ಬಳ್ಳಿ:ಇಂಡಸ್ ಎಂಟರ್‌ಪ್ರೆನೂರ್ಸ್ (ಟೆಇಇ) ವತಿಯಿಂದ ಫೆ.1 ಮತ್ತು 2 ರಂದು ಟೈಕಾನ್ -2020 ಉದ್ಯಮಶೀಲತಾ ಶೃಂಗಸಭೆಯನ್ನು ಗೋಕುಲರಸ್ತೆಯ ಡೆನಿಸನ್ಸ್ ಹೋಟೆಲಿನಲ್ಲಿ ಆಯೋಜಿಸಲಾಗಿದೆ ಎಂದು ಟೈಕಾನ್ ಅಧ್ಯಕ್ಷ ಶಶಿಧರ್ ಶೆಟ್ಟರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟೈಕಾನ್ ಈಗಾಗಲೇ ಹುಬ್ಬಳ್ಳಿಯಿಂದ ದೇಶದಾದ್ಯಂತ ಹಲವಾರು ಉದ್ಯಮಶೀಲತೆ ಜಾಗೃತಿ ಕಾರ್ಯಕ್ರಮ ನಡೆಸಿದೆ. ಅದರಂತೆ ಯಶಸ್ವಿ ಉದ್ಯಮ, ಉನ್ನತ ವೃತ್ತಿಪರರು, ವೈದ್ಯರು, ಶಿಕ್ಷಣ ತಜ್ಞರು ಹೊಸತನವನ್ನು ಒಗ್ಗೂಡಿಸಿ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲು ಇಮ್ಯಾಜಿನ್, ಇನ್ನೋವೇಟ್, ಸ್ಪೂರ್ತಿ ಕಾರ್ಯಕ್ರಮಗಳನ್ನು ಟೈಕಾನ್ -2020 ಹೆಸರಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
2020 ಉದ್ಯಮಶೀಲತಾ ಶೃಂಗಸಭೆಯ ಕುರಿತು ಸುದ್ಧಿಗೋಷ್ಠಿ ಎರಡು ದಿನಗಳ ಕಾಲ ನಡೆಯುವ ಕಾರ್ಯಕ್ರಮವನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಚಿವ ಜಗದೀಶ್ ಶೆಟ್ಟರ್, ಶ್ರೀನಿವಾಸ ಮಾನೆ, ಗೌರವ ಗುಪ್ತಾ ಉದ್ಘಾಟನೆ ಮಾಡಲಿದ್ದು, ಫೆ.1 ರಂದು ಮಹಿಳಾ ಸಮಾವೇಶ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಜಾಗ್ರಾನ್ ಪ್ರಕಾಶನ್ ಲಿಮಿಟೆಡ್ ನ ಅಧ್ಯಕ್ಷ ಅಪೂರ್ವ ಪುರೋಹಿತ, ಗ್ಲೋಬಲ್ ಅಡ್ಜಸ್ಟ್ಮೇಂಟ್ಸ್ ಫೌಂಡೇಶನ್ ಅಧ್ಯಕ್ಷೆ ಡಾ.ರಂಜಿನಿ ಮಣಿಯನ್ ಅವರು ಮಹಿಳೆಯಲ್ಲಿ ನಾಯಕತ್ವದ ಗುಣ ಬೆಳೆಸುವ ಜೊತೆಗೆ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡಲಿದ್ದಾರೆ ಎಂದು ತಿಳಿಸಿದರು.
ಫೆ.2 ರಂದು ಪತಂಜಲಿ ಸಹ ಸಂಸ್ಥಾಪಕ ಹಾಗೂ ಯೋಗ ಗುರು ಬಾಬಾ ರಾಮದೇವ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದು ಮೂಲ ಸೌಕರ್ಯ ಅಭಿವರ್ಧಕ ಜೆಎಂ ಆರ್ ಸಮೂಹದ ಸ್ಥಾಪಕ ಜೆ.ಎಂ.ರಾವ್, ಕ್ಯಾವಿನ್ ಕೇರ್ ಸ್ಥಾಪಕ ನಿರ್ದೇಶಕ ಸಿ.ಕೆ.ರಂಗನಾಥನ್, ಉದ್ಯಮಿ ಘೋಡಾವತ್ ಇಂಡಸ್ಟ್ರೀಸ್ ಇಂಡಿಯಾ ಪ್ರೈ.ಲಿಮಿಟೆಡ್ ಅಧ್ಯಕ್ಷ ಸಂಜಯ ಗೋಡಾವತ್, ಟಾಟಾ ಕಾಫಿ ಲಿಮಿಟೆಡ್ ಅಧ್ಯಕ್ಷ ಹರೀಶ್ ಭಟ್, ಲೇಖಕ ಶಿವ ಖೇರ್, ಆದಿತ್ಯ ಬಿರ್ಲಾ ಸನ್ ಲೈಪ್ ಎಎಂ ಸಿ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕಿ ಎ.ಬಾಲಸುಬ್ರಹ್ಮಣ್ಯಂ, ಗ್ರಾಹಕ ಸೇವಾ ಕೂಲಂಕುಷ ವಿಭಾಗದ ಮುಖ್ಯಸ್ಥ ಡಿ.ರಮೇಶ್ ಕುಮಾರ, ಅನಿಲ ಗುಡಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಸಮಾವೇಶಕ್ಕೆ ಸುಮಾರು 6,000 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ. ಆಸಕ್ತಿ ಹೊಂದಿರುವವರು ವೆಬ್ ಸೈಟ್ http;//tiecon.tiehubli.org/ ನಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದರು.