ಕರ್ನಾಟಕ

karnataka

ETV Bharat / state

ಭಾರಿ ಮೊತ್ತದ ದಂಡಕ್ಕೆ ಬೆಚ್ಚಿದ ಬೈಕ್​ ಸವಾರರು... ಹೆಲ್ಮೆಟ್ ಖರೀದಿ ಜೋರು - helmet

ರಾಜ್ಯದಲ್ಲಿ ಸೆ.1 ರಿಂದ ಜಾರಿಗೊಂಡ ಹೊಸ ಮೋಟಾರು ವಾಹನ ತಿದ್ದುಪಡಿ ಕಾಯ್ದೆ ಧಾರವಾಡ ಜಿಲ್ಲೆಯಲ್ಲಿ ಸೆ.3 ರಿಂದ ಜಾರಿಗೆ ಬಂದಿದೆ. ಹೀಗಾಗಿ ಅವಳಿನಗರದ ಪೊಲೀಸರು ಕಾರ್ಯಾಚರಣೆಯನ್ನು ಚುರುಕುಗೊಳಿಸಿದ್ದಾರೆ. ಭಾರಿ ಮೊತ್ತದ ದಂಡಕ್ಕೆ ಹೆದರಿರುವ ಬೈಕ್​ ಸವಾರರು ಈಗ ಹೆಲ್ಮೆಟ್​ಗಳ ಖರೀದಿಗೆ ಮುಗಿಬಿದ್ದಿದ್ದಾರೆ.

ಬಾರಿ ಮೊತ್ತದ ದಂಡಕ್ಕೆ ಹೆದರಿ ಹೆಲ್ಮೆಟ್ ಮೊರೆ ಹೋದ ಬೈಕ್ ಸವಾರರು

By

Published : Sep 17, 2019, 11:53 PM IST

ಹುಬ್ಬಳ್ಳಿ:ಹೊಸ ಮೋಟಾರು ವಾಹನ ತಿದ್ದುಪಡಿ ಕಾಯ್ದೆ ಜಾರಿಗೊಂಡ ನಂತರ ಸಂಚಾರ ನಿಯಮಗಳಲ್ಲಿ ಬಹಳಷ್ಟು ಬದಲಾವಣೆಯಾಗಿವೆ. ಟ್ರಾಫಿಕ ಪೊಲೀಸರು ಜಡಿಯುತ್ತಿರುವ ಭಾರಿ ದಂಡಕ್ಕೆ ಹೆದರಿ ಹೆಲ್ಮೆಟ್​ಗಳ ಮೊರೆ ಹೋಗುತ್ತಿದ್ದಾರೆ.

ಭಾರಿ ಮೊತ್ತದ ದಂಡಕ್ಕೆ ಹೆದರಿ ಹೆಲ್ಮೆಟ್ ಮೊರೆ ಹೋದ ಬೈಕ್ ಸವಾರರು

ಇದರಿಂದಾಗಿ ಮಾರುಕಟ್ಟೆಯಲ್ಲಿ ಹೆಲ್ಮೆಟ್​ಗಳಿಗೆ ಬೇಡಿಕೆ ಹೆಚ್ಚಾಗಿದೆ. ಕಳೆದ ವಾರದಿಂದ ಹೆಲ್ಮೆಟ್ ಮಾರಾಟದಲ್ಲಿ ಗಣನೀಯ ಏರಿಕೆಯಾಗಿದೆ. ನಗರದ ಕೊಪ್ಪಿಕರ ರಸ್ತೆ, ದುರ್ಗದ ಬಯಲು, ಗೋಕುಲ ರಸ್ತೆ, ರೈಲ್ವೆ ಸ್ಟೇಷನ್ ರಸ್ತೆ ಸೇರಿದಂತೆ ಮುಂತಾದ ಕಡೆಗಳಲ್ಲಿನ ಹೆಲ್ಮೆಟ್ ಶೋರೂಂಗಳು ಜನರಿಂದ ತುಂಬಿ ತುಳುಕುತ್ತಿವೆ.

ಈ ಮೊದಲು ದಿನಕ್ಕೆ 10 ರಿಂದ 20 ಹೆಲ್ಮೆಟ್​ಗಳು ಮಾರಾಟವಾಗುತ್ತಿದ್ದವು. ಆದರೆ ಇದೀಗ 50 ರಿಂದ 60 ಹೆಲ್ಮೆಟ್​ಗಳು ಮಾರಾಟವಾಗುತ್ತಿದೆ ಅಂತಾರೆ ಅಂಗಡಿ ಮಾಲೀಕರು.

ABOUT THE AUTHOR

...view details