ಕರ್ನಾಟಕ

karnataka

ETV Bharat / state

ಫಜಲ್ ಪಾರ್ಕಿಂಗ್ ಕಾಮಗಾರಿ ಪೂರ್ಣಗೊಂಡರೂ ಪ್ರಾರಂಭವಾಗದ ಸೇವೆ: ಯಾಕಿಷ್ಟು ನಿರ್ಲಕ್ಷ್ಯ..? - Hubli-Dharwad Smart City Limited

ಹುಬ್ಬಳ್ಳಿ - ಧಾರವಾಡ ಸ್ಮಾರ್ಟ್ ಸಿಟಿ ಲಿಮಿಟೆಡ್ ಫಜಲ್ ಪಾರ್ಕಿಂಗ್ ಸೌಲಭ್ಯವನ್ನು ಒದಗಿಸುತ್ತಿದೆ. ಈ ಹಿನ್ನಲೆ ಗುತ್ತಿಗೆದಾರರು ಪಾರ್ಕಿಂಗ್ ಸೌಲಭ್ಯ ನಿರ್ಮಾಣ ಮತ್ತು ನಿರ್ವಹಣೆಗಾಗಿ ಟೆಂಡರ್ ಸ್ವೀಕರಿಸಿದ್ದಾರೆ. ಆದರೆ, ಕಾಮಗಾರಿ ಪೂರ್ಣಗೊಂಡರೂ ಕೂಡಾ ಕಾರ್ಯಾರಂಭ ಮಾಡಿಲ್ಲ.

fazal-parking-construction
ಫಜಲ್ ಪಾರ್ಕಿಂಗ್ ಕಾಮಗಾರಿ ಪೂರ್ಣ

By

Published : Aug 19, 2021, 8:40 PM IST

ಹುಬ್ಬಳ್ಳಿ:ಅವಳಿನಗರದ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಪಾರ್ಕಿಂಗ್ ಸಮಸ್ಯೆ ಬಗೆಹರಿಸಲು ಫಜಲ್ ಪಾರ್ಕಿಂಗ್ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿತ್ತು. ಅಲ್ಲದೇ ಫೆಬ್ರವರಿ ತಿಂಗಳಲ್ಲಿ ಕಾರ್ಯಾರಂಭ ಮಾಡುವ ಭರವಸೆ ಕೂಡ ನೀಡಿದ್ದರು. ಆದರೀಗ ಆಗಸ್ಟ್ ಬಂದರೂ ಇದುವರೆಗೂ ಕಾರ್ಯಾರಂಭ ಮಾಡಿಲ್ಲ.

ಹು-ಧಾ ಮಹಾನಗರ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಮಾತನಾಡಿದ್ದಾರೆ

ಕಾಮಗಾರಿ ಪೂರ್ಣಗೊಂಡಿರುವ ಬಗ್ಗೆ ಗುತ್ತಿಗೆದಾರರು ಸ್ಮಾರ್ಟ್ ಸಿಟಿ ಇಲಾಖೆಗೆ ತಿಳಿಸಿದ್ದಾರೆ. ಆದರೆ, ಸ್ಮಾರ್ಟ್ ಸಿಟಿ ಹಾಗೂ ಪಾಲಿಕೆಯ ಸಂವಹನದ ಕೊರತೆಯಿಂದ ಆರು ತಿಂಗಳು ಕಳೆದರೂ ಇದುವರೆಗೂ ಚಾಲನೆ ಸಿಕ್ಕಿಲ್ಲ.

ಹುಬ್ಬಳ್ಳಿ - ಧಾರವಾಡ ಸ್ಮಾರ್ಟ್ ಸಿಟಿ ಲಿಮಿಟೆಡ್ ಫಜಲ್ ಪಾರ್ಕಿಂಗ್ ಸೌಲಭ್ಯವನ್ನು ಒದಗಿಸುತ್ತಿದೆ. ಈ ಹಿನ್ನಲೆ ಗುತ್ತಿಗೆದಾರರು ಪಾರ್ಕಿಂಗ್ ಸೌಲಭ್ಯ ನಿರ್ಮಾಣ ಮತ್ತು ನಿರ್ವಹಣೆಗಾಗಿ ಟೆಂಡರ್ ಸ್ವೀಕರಿಸಿದ್ದಾರೆ. ಆದರೆ, ಕಾಮಗಾರಿ ಪೂರ್ಣಗೊಂಡರೂ ಕಾರ್ಯಾರಂಭ ಮಾಡಿಲ್ಲ.

ಫಜಲ್ ಪಾರ್ಕಿಂಗ್

ನಿರ್ವಹಣೆ ವೆಚ್ಚ ಭರಿಸಲು ಹೆಣಗಾಟ: ಈ ನಿಟ್ಟಿನಲ್ಲಿ ಸ್ಮಾರ್ಟ್ ಸಿಟಿಯ ಯೋಜನೆ ಆಡೋಣ ಬಾ ಕೆಡಿಸೋಣ ಬಾ ಎನ್ನುವಂತಾಗಿದೆ. ನಿರ್ಮಾಣ ಕಾಮಗಾರಿ ಏನೋ ಚುರುಕುಗೊಂಡಿತ್ತು ನಿಜ. ಆದರೆ, ಇದುವರೆಗೂ ಕಾರ್ಯಾರಂಭ ಮಾಡದೇ ಇರುವುದರಿಂದ ಗುತ್ತಿಗೆದಾರರು ನಿರ್ವಹಣೆ ವೆಚ್ಚ ಭರಿಸಲು ಹೆಣಗಾಡುವಂತಾಗಿದೆ.

ವಿಪರ್ಯಾಸಕರ ಸಂಗತಿ: ರಾಜ್ಯದಲ್ಲಿ ಮೊದಲನೆಯದಾದ ಈ ಹೊಸ ಸೌಲಭ್ಯವನ್ನು 180 ಚದರ ಮೀಟರ್‌ನಲ್ಲಿ 4.59 ಕೋಟಿ ರೂ.ಗಳ ವೆಚ್ಚದಲ್ಲಿ ಮಹಾತ್ಮ ಗಾಂಧಿ ಉದ್ಯಾನದಲ್ಲಿ ನಿರ್ಮಿಸಲಾಗಿದೆ. ವಿದ್ಯುತ್ಕಾಂತೀಯ ಸೌಲಭ್ಯವು ವಾಹನಗಳನ್ನು ಎತ್ತುವಂತೆ ಮತ್ತು ಯಾವುದೇ ತೊಂದರೆಯಿಲ್ಲದೆ ಒದಗಿಸಲಾದ ಸೀಮಿತ ಪ್ರದೇಶದಲ್ಲಿ ನಿಲ್ಲಿಸಲು ಸಹಾಯ ಮಾಡುತ್ತದೆ. ಆದರೆ, ಎಲ್ಲ ಪೂರ್ಣಗೊಂಡರೂ ಇದುವರೆಗೂ ಆರಂಭವಾಗದೇ ಇರುವುದು ವಿಪರ್ಯಾಸಕರ ಸಂಗತಿಯಾಗಿದೆ.

ಓದಿ:ನಾಡ ಬಂದೂಕು ಸಿಡಿಸಿ ಕೇಂದ್ರ ಸಚಿವರಿಗೆ ಸ್ವಾಗತ ಪ್ರಕರಣ: ಮೂವರು ಕಾನ್ಸ್​​ಟೇಬಲ್​​​​​ ಅಮಾನತು!

ABOUT THE AUTHOR

...view details