ಧಾರವಾಡ:ತನ್ನ ಮಗಳನ್ನು ಹುಡುಕಿಕೊಡುವಂತೆ ತಂದೆಯೊಬ್ಬರು ಮಹಿಳಾ ಪೊಲೀಸ್ ಠಾಣೆ ಎದುರು ನೊಂದು ಗೋಳಾಡುತ್ತ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ.
ಪೊಲೀಸ್ ಠಾಣೆ ಎದುರು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ತಾಲೂಕಿನ ಮರೇವಾಡ ಗ್ರಾಮದ ಮುದ್ದಪ್ಪ ಜಂಗಳಿ ಎಂಬವರು ಪೊಲೀಸ್ ಠಾಣೆ ಎದುರು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ನಿನ್ನೆ ಮಧ್ಯಾಹ್ನದಿಂದ ಠಾಣೆಯ ಎದುರು ಕುಳಿತಿರು ಇವರು, ಮಗಳನ್ನು ಹುಡುಕಿಕೊಡುವಂತೆ ಪೊಲೀಸ್ ಠಾಣೆ ಎದುರು ಮನವಿ ಮಾಡುತ್ತಿದ್ದಾರೆ.
ಓದಿ: ಲಾಕ್ಡೌನ್ ತೆರವಿನ ನಂತರವೂ ಚೇತರಿಕೆ ಕಾಣದ ವಾಯುವ್ಯ ಕ.ರ.ಸಾರಿಗೆ ಸಂಸ್ಥೆ
ಜುಲೈ 23 ರಂದು ಮುದ್ದಪ್ಪ ಜಂಗಳಿಯವರ ಮಗಳು ಕಾಣೆಯಾಗಿದ್ದಾಳೆ. ಹಾಗಾಗಿ, ಮಗಳನ್ನು ಹುಡುಕಿ ಕೊಡುವಂತೆ ಠಾಣೆಗೆ ಅಲೆದಾಟ ನಡೆಸಿದ್ದಾರೆ. ತಮ್ಮ ದೂರಿಗೆ ಪೊಲೀಸರು ಸ್ಪಂದಿಸಿಲ್ಲ, ಇದರಿಂದ ಬೇಸತ್ತ ಮುದ್ದಣ್ಣ ನೇಣು ಹಾಕಿಕೊಳ್ಳುವ ಯತ್ನ ಮಾಡಿದ್ದಾರೆ. ಅಷ್ಟೇ ಅಲ್ಲದೆ, ತನ್ನ ಮಗಳನ್ನು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮಡ್ಡಿಗಿರಿಯಾಲ ಗ್ರಾಮದ ಗಂಗಪ್ಪ ಚುರಮರಿ ಎಂಬ ಯುವಕ ಅಪಹರಿಸಿದ್ಧಾನೆೆ ಎಂದು ಆರೋಪಿಸಿದ್ದಾರೆ.