ಕರ್ನಾಟಕ

karnataka

ETV Bharat / state

ಮದ್ಯ ಸೇವನೆಗೆ ಹಣ ನೀಡುವಂತೆ ಪೀಡಿಸುತ್ತಿದ್ದ ಮಗ: ಹಾರೆಯಿಂದ ಹೊಡೆದು ಕೊಂದ ತಂದೆ - ಧಾರವಾಡ ಇತ್ತೀಚಿನ ಸುದ್ದಿ

ಕುಡಿಯಲು ಹಣ ನೀಡುವಂತೆ ಮನೆಯಲ್ಲಿ ಪೀಡಿಸುತ್ತಿದ್ದ ಮಗನನ್ನು ತಂದೆಯೇ ಹಾರೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

dharwad
ಕೊಲೆಯಾದ ಮಗ

By

Published : Jul 20, 2021, 8:37 AM IST

ಧಾರವಾಡ: ಕುಡಿಯಲು ಹಣ ನೀಡುವಂತೆ ಪೀಡಿಸುತ್ತಿದ್ದ ಮಗನನ್ನು ತಂದೆಯೇ ಕೊಲೆ ಮಾಡಿರುವ ಘಟನೆ ತೆಲುಗರ ಓಣಿಯಲ್ಲಿ ನಡೆದಿದೆ. ಬಸವರಾಜ ಹಿರೇಕುಂಬಿ (36) ಮೃತ ವ್ಯಕ್ತಿ. ಫಕೀರಪ್ಪ ಕೊಲೆ ಮಾಡಿದ ತಂದೆ.

ಕೊಲೆಯಾದ ಮಗ

ನಿತ್ಯವೂ ಮನೆಯಲ್ಲಿ ಕುಡಿಯಲು ಹಣ ನೀಡುವಂತೆ ಬಸವರಾಜ ಹಿಂಸಿಸುತ್ತಿದ್ದನಂತೆ. ಅಷ್ಟೇ ಅಲ್ಲದೆ, ಹಣ ನೀಡದಿದ್ದರೆ ಮನೆ ದಾಖಲೆ ನೀಡುವಂತೆ ಪಟ್ಟು ಹಿಡಿದಿದ್ದಾನೆ. ಇದರಿಂದ ಕೋಪಗೊಂಡ ತಂದೆ ಫಕೀರಪ್ಪ ಹಾರಿಯಿಂದ ಹೊಡೆದು ಕೊಲೆ ಮಾಡಿದ್ದಾನೆ.

ಸದ್ಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಫಕೀರಪ್ಪನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ABOUT THE AUTHOR

...view details