ಧಾರವಾಡ:ಅಳಿಯನೋರ್ವ ಮಾವನಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿರುವ ಘಟನೆ ಜಿಲ್ಲೆಯ ಕಮಲಾಪುರದಲ್ಲಿ ನಡೆದಿದೆ. ಯಲ್ಲಪ್ಪ ಧೂಳಮ್ಮನವರ ಇರಿತಕ್ಕೊಳಗಾದ ವ್ಯಕ್ತಿ.
ಮೂಲತಃ ಶಿಗ್ಗಾಂವ್ ತಾಲೂಕಿನ ಅಂದಲಗಿ ಗ್ರಾಮದ ನಿವಾಸಿ ಯಲ್ಲಪ್ಪ, ಜ್ಯೋತಿ ಎಂಬವರನ್ನು ಪ್ರೀತಿಸಿ ವರಿಸಿದ್ದರು. ಕಳೆದ 12 ವರ್ಷದಿಂದ ಇವರ ಕುಟುಂಬ ಧಾರವಾಡದಲ್ಲಿ ವಾಸವಾಗಿತ್ತು. ನಿನ್ನೆ ಯಲ್ಲಪ್ಪ ಮತ್ತು ಆತನ ಹೆಂಡತಿ ನಡುವೆ ಜಗಳವಾಗಿದೆ. ಈ ವೇಳೆ ಮಧ್ಯಪ್ರವೇಶಿಸಿದ ಅಳಿಯ ಹೇಮಂತ ಗುಮ್ಮಗೋಳ ಏಕಾಏಕಿ ಯಲ್ಲಪ್ಪನಿಗೆ ಚಾಕುವಿನಿಂದ ಇರಿದಿದ್ದಾನೆ ಎಂದು ತಿಳಿದುಬಂದಿದೆ.