ಹುಬ್ಬಳ್ಳಿ:ಗ್ರಾಮ ಪಂಚಾಯಿತಿ ಚುನಾವಣೆ ಕಾವೇರುತ್ತಿದೆ. ಅತ್ತೆ, ಮಾವ, ಸೊಸೆ, ಅಣ್ಣ, ತಮ್ಮ ಸ್ಪರ್ಧೆಗೆ ಇಳಿಯುವುದು ಈ ಚುನಾವಣೆಯಲ್ಲಿ ಸಾಮಾನ್ಯ. ಇಂತಹದೇ ಒಂದು ಘಟನೆಗೆ ಸಾಕ್ಷಿಯಾಗಿದೆ ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮ.
ಗುಡೇನಕಟ್ಟಿ ಗ್ರಾಮ ಪಂಚಾಯಿತಿ ವಾರ್ಡ್ ನಂಬರ್ 2 ರಲ್ಲಿ ಒಂದೇ ಕುಟುಂಬದ ಮಾವ ಹಾಗೂ ಸೊಸೆ ಸ್ಪರ್ಧೆಗೆ ಇಳಿದಿದ್ದಾರೆ. ಬಸವರಾಜ್ ಯೋಗಪ್ಪನವರ್ ಸಾಮಾನ್ಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿದ್ರೆ ಬಸವರಾಜ್ ಅವರ ಸಹೋದರನ ಪತ್ನಿ (ಸೊಸೆ) ವಿಶಾಲ ಯೋಗಪ್ಪನವರ್ "ಬ" ವರ್ಗದ ಅಭ್ಯರ್ಥಿಯಾಗಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.