ಹುಬ್ಬಳ್ಳಿ: ನಗರದಲ್ಲಿ ಮತ್ತೆ ಪುಡಿರೌಡಿಗಳ ಹಾವಳಿ ಹೆಚ್ಚಾಗಿದೆ. ಕ್ಷುಲ್ಲಕ ವಿಚಾರಕ್ಕೆ ವ್ಯಕ್ತಿಯೊಬ್ಬನ ಮೇಲೆ ನಡು ರಸ್ತೆಯಲ್ಲಿಯೇ ಚಾಕು ಹಾಗೂ ಬಾಟಲಿಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನ್ಯೂ ಇಂಗ್ಲಿಷ್ ಸ್ಕೂಲ್ ಬಳಿ ತಡರಾತ್ರಿ ನಡೆದಿದೆ.
ಇಂದಿರಾ ನಗರ ನಿವಾಸಿ ಯಶವಂತ ಭಂಡಾರಿ ಎಂಬಾತ ನಿನ್ನೆ ರಾತ್ರಿ ನ್ಯೂ ಇಂಗ್ಲಿಷ್ ಸ್ಕೂಲ್ ಬಳಿಯಲ್ಲಿನ ಹೋಟೆಲ್ನಲ್ಲಿ ಬಿರಿಯಾನಿ ತೆಗೆದುಕೊಂಡು ಹೋಗಲು ಬಂದಿದ್ದ. ಆಗ ಸೆಟ್ಲಿಮೆಂಟ್ನ ಅಭಿಷೇಕ್ ಜಾಧವ್ ಕೂಡಾ ಬಿರಿಯಾನಿ ಒಯ್ಯಲು ಹೋಟೆಲ್ಗೆ ಬಂದಿದ್ದಾನೆ. ಆಗ ಇಬ್ಬರು ಪರಸ್ಪರ ಗುರಾಯಿಸಿ ನೋಡಿದ್ದಾರೆ. ಬಳಿಕ ಅಭಿಷೇಕ್ ತನ್ನ ಜೊತೆ ಇದ್ದ 10ಕ್ಕೂ ಹೆಚ್ಚು ಸಹಚರರ ಜೊತೆ ಸೇರಿ ಯಶವಂತ ಭಂಡಾರಿ ಮೇಲೆ ಚಾಕು ಹಾಗೂ ಬಾಟಲಿಗಳಿಂದ ಹಲ್ಲೆ ಮಾಡಿದ್ದಾನೆ ಎನ್ನಲಾಗ್ತಿದೆ.