ಧಾರವಾಡ: ಖಾಸಗಿ ಬ್ಯಾಂಕ್‌ನಿಂದ ಸಾಲ ತುಂಬುವಂತೆ ನೋಟಿಸ್ ಬಂದ ಹಿನ್ನೆಲೆ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಮಲಾಪುರದಲ್ಲಿ ನಡೆದಿದೆ.
ಸಾಲ ಮರುಪಾವತಿಸುವಂತೆ ನೋಟಿಸ್: ಹೆದರಿದ ರೈತ ಆತ್ಮಹತ್ಯೆ - dharwad latest news
ಬ್ಯಾಂಕ್ ಹಾಗೂ ಸೊಸೈಟಿಗಳಲ್ಲಿ ಸಾಲ ಮಾಡಿದ್ದ ರೈತನೊಬ್ಬ, ಸಾಲ ಮರುಪಾವತಿಸಲಾಗದೇ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಖಾಸಗಿ ಬ್ಯಾಂಕ್ ಕಿರುಕುಳ ಆರೋಪ: ರೈತ ಆತ್ಮಹತ್ಯೆ
ಮಹಾರುದ್ರಪ್ಪ ಕೋಟಿ (52) ಆತ್ಮಹತ್ಯೆ ಮಾಡಿಕೊಂಡ ರೈತ. ಬೀರೇಶ್ವರ ಸೊಸೈಟಿಯಿಂದ ಈತನಿಗೆ ನೋಟಿಸ್ ಬಂದಿತ್ತು.
ಸೊಸೈಟಿ ಸೇರಿ ವಿವಿಧ ಕಡೆ ಈ ರೈತ ಸಾಲ ಮಾಡಿದ್ದರು ಎನ್ನಲಾಗಿದೆ. ಸಾಲ ತುಂಬಲು ಹಣ ಇಲ್ಲದೇ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಊರ ಹೊರಗಿನ ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಧಾರವಾಡ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : Feb 8, 2021, 7:42 PM IST