ಧಾರವಾಡ: ನವಲಗುಂದ ತಾಲೂಕಿನ ತುಪ್ಪದಕುರಹಟ್ಟಿ ಹಾಗೂ ನಾವಳ್ಳಿ ಗ್ರಾಮದ ರೈತರು ಪಿಡಬ್ಲ್ಯೂಡಿ ಇಲಾಖೆಯಿಂದ ಕಲ್ವಡ್ ನಿರ್ಮಾಣ ಕಾಮಗಾರಿಯನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿ ಕೈಯಲ್ಲಿ ವಿಷದ ಬಾಟಲಿ ಹಿಡಿದುಕೊಂಡು ಪ್ರತಿಭಟನೆ ನಡೆಸಿದ್ದಾರೆ.
ಗ್ರಾಮಗಳ ರೈತರ ಜಮೀನಿನ ಬದಿಯಲ್ಲಿ ನರಗುಂದ - ಗದಗ ರಾಜ್ಯ ಹೆದ್ದಾರಿ ಹಾದು ಹೋಗಿದೆ. ಈಗ ರೈತರ ಜಮೀನುಗಳ ಬದಿಯಲ್ಲಿ ಪಿಡಬ್ಲ್ಯೂಡಿ ಇಲಾಖೆಯಿಂದ ಕಲ್ ವಡ್ ( ಪೂಲ್ ) ನಿರ್ಮಾಣ ಕಾಮಗಾರಿ ಕೈಗೊಂಡಿದೆ.