ಧಾರವಾಡ:ಫಲವತ್ತಾದ ಭೂಮಿ ನಂಬಿಕೊಂಡು ಜೀವನ ನಡೆಸುತ್ತಿರುವ ರೈತ ಕುಟುಂಬಗಳಿಗೆ ಇದೀಗ ಭೂ ಸ್ವಾಧೀನಕ್ಕಾಗಿ ಕೆಐಡಿಬಿಯಿಂದ ನೋಟಿಸ್ ಬರಲು ಶುರುವಾಗಿದ್ದು, ಇದರಿಂದ ಅನ್ನದಾತರಿಗೆ ಬರ ಸಿಡಿಲು ಬಡಿದಂತಾಗಿದೆ.
ಧಾರವಾಡ ತಾಲ್ಲೂಕಿನ ಗುಳೇದಕೊಪ್ಪ, ಶಿಂಗನಹಳ್ಳಿ, ಕೋಟೂರು, ಹೆಗ್ಗೇರಿ, ವೆಂಕಟಾಪೂರ, ಕಲ್ಲಾಪೂರ, ವೀರಾಪೂರ ಸೇರಿದಂತೆ 14 ಗ್ರಾಮದ ನೂರಾರು ರೈತರಿಗೆ ಕೆಐಡಿಬಿ ಯಾವುದೇ ಮುನ್ಸೂಚನೆ ನೀಡದೇ ನೋಟಿಸ್ ನೀಡಿದೆ. ಆ ಗ್ರಾಮಗಳಲ್ಲಿನ ಸಾವಿರಾರು ಎಕರೆ ಫಲವತ್ತಾದ ಜಮೀನು ಸುವರ್ಣ ಕರ್ನಾಟಕ ಕೈಗಾರಿಕೆ ಕಾರಿಡಾರ್ ಯೋಜನೆ ಸ್ವಾಧೀನಪಡಿಸಿಕೊಳ್ಳಲು ಕೆಐಡಿಬಿ ಮುಂದಾಗಿದೆ. ಈ ಸಂಬಂಧ ಜಮೀನು ಮಾಲೀಕರಿಗೆ ಈಗಾಗಲೇ ನೋಟಿಸ್ ಬರುತ್ತಿರುವುದರಿಂದ ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಭೂಮಿ ಸ್ವಾಧೀನ ಪ್ರಕ್ರಿಯೆ ವಿರೋಧಿಸಿ ರೈತರ ಹೋರಾಟ ರೈತರಿಗೆ ಯಾವುದೇ ದಿನಾಂಕ ಹೊರಡಿಸದೇ ತುಂಬಾ ತಡವಾಗಿ ನೋಟಿಸ್ ನೀಡಿದ್ದು, ಈ ಕುರಿತು ಈಗಾಗಲೇ ಜನಪ್ರತಿನಿಧಿಗಳು, ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಕೆಲ ದಿನಗಳ ಹಿಂದೆ ಕೆಐಡಿಬಿ ಅಧಿಕಾರಿಗಳೊಂದಿಗೆ ರೈತರು ಮಾತುಕತೆ ನಡೆಸಿದ ಸಂದರ್ಭದಲ್ಲಿ ಇದಕ್ಕೆ ರೈತರ ವಿರೋಧವಿದ್ದರೆ, ಸರ್ಕಾರದ ಗಮನಕ್ಕೆ ತರುವುದಾಗಿ ಹೇಳಿದ್ದರು. ಆದರೆ ಇದಕ್ಕೆ ಇಲ್ಲಿಯವರೆಗೆ ಲಿಖಿತ ರೂಪದ ದಾಖಲೆ ನೀಡಿಲ್ಲ. ಇದರಲ್ಲಿ ವಿಫಲವಾದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ರೈತರ ಫಲವಂತಾದ ಭೂಮಿ ಮೇಲೆ ಕೆಐಡಿಬಿ ಕಣ್ಣು ಇದನ್ನೂ ಓದಿ: ಪ್ರಾಣ ಕೊಟ್ಟೇವು, ಇಂಚು ಭೂಮಿ ಬಿಡುವುದಿಲ್ಲ: ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ಪ್ರತಿಭಟನೆ
ಇದೇ ವಿಚಾರವಾಗಿ ಇಂದು ಸುದ್ದಿಗೋಷ್ಠಿ ನಡೆಸಿದ ರೈತರು ಹಾಗೂ ರೈತ ಸಂಘಟನೆಗಳು ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿವೆ. ಸುದ್ದಿಗೋಷ್ಠಿಯಲ್ಲಿ ರೈತ ಹೋರಾಟಗಾರ ಲಕ್ಷ್ಮಣ ಜಡಗಣ್ಣವರ,ಧಾರವಾಡ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾಜಿ ಅಧ್ಯಕ್ಷ ವಿಠಲ ಪೀರಗಾರ, ರೈತರಾದ ಉದಯಕುಮಾರ್ ಪಾಟೀಲ್, ಯಲ್ಲಪ್ಪ ಮುರೋಜಿ, ಈಶ್ವರ್ ಇಂಚಲ, ಗ್ರಾಮ ಪಂಚಾಯ್ತಿ ಸದಸ್ಯ ರಮೇಶ್ ಹೊಸಮನಿ ಸೇರಿದಂತೆ ಅನೇಕರು ಭಾಗಿಯಾಗಿದ್ದರು.