ಕರ್ನಾಟಕ

karnataka

ಲಾಕ್​​ಡೌನ್ ಎಫೆಕ್ಟ್: ಕುಸಿದ ಮೆಣಸಿನಕಾಯಿ ಬೆಲೆ, ವಿಧಿಯಿಲ್ಲದೆ ರೈತನಿಂದ ಬೆಳೆ ನೆಲಸಮ

By

Published : Jun 2, 2021, 5:15 PM IST

ಹಸಿ ಮೆಣಸಿನಕಾಯಿಗೆ ಮಾರುಕಟ್ಟೆಯಲ್ಲಿ ಅತೀ ಕಡಿಮೆ ಬೆಲೆಯಿದ್ದು, ಯಾರೂ ಕೇಳದ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರು ಎಕರೆಗೆ 25 ಸಾವಿರ ರೂ. ಖರ್ಚು ಮಾಡಿದ್ದು, ಹಾಕಿದ ಬಂಡವಾಳವೂ ಬರದ ಹಿನ್ನೆಲೆ ಟ್ರ್ಯಾಕ್ಟರ್ (ರೋಟರ್) ಹೊಡೆದು ಬೆಳೆ ನಾಶಪಡಿಸಿದ್ದಾರೆ.

green-chilly-crop-in-darwad
ಬೆಳೆ ನಾಶಪಡಿಸಿದ ರೈತ

ಧಾರವಾಡ:ಹಸಿ ಮೆಣಸಿನಕಾಯಿ ದರ ಕುಸಿತ ಹಿನ್ನೆಲೆ, ರೈತನೋರ್ವ ಬೆಳೆ ನಾಶ ಮಾಡಿದ ಘಟನೆ ತಾಲೂಕಿನ ಅಮ್ಮಿನಬಾವಿ ಗ್ರಾಮದಲ್ಲಿ ನಡೆದಿದೆ.

ಬೆಳೆ ನಾಶಪಡಿಸಿದ ರೈತ

ಓದಿ: ಸಿಜೆಂಟಾ ತಳಿಯ ಮೆಣಸಿನಕಾಯಿ ಬೆಳೆಗೆ ಕೊಳೆ ರೋಗ.. ಬೆಳೆನಾಶಕ್ಕೆ ಮುಂದಾದ ರೈತರು..

ಲಾಕ್‌ಡೌನ್ ಹಿನ್ನೆಲೆ ಬೇಡಿಕೆ ಕುಸಿತಗೊಂಡ ಪರಿಣಾಮ ರೈತ ಮೆಣಸಿನಕಾಯಿ ಬೆಳೆ ನಾಶ ಮಾಡಿದ್ದಾನೆ. ಅತೀ ಕಡಿಮೆ ಬೆಲೆಯಿದ್ದು, ಮಾರುಕಟ್ಟೆಯಲ್ಲಿ ಯಾರು ಕೇಳದ ಪರಿಸ್ಥಿತಿ ನಿರ್ಮಾಣವಾಗಿದೆ. ಎಕರೆಗೆ 25 ಸಾವಿರ ರೂ. ಖರ್ಚು ಮಾಡಿದ್ದು, ಹಾಕಿದ ಬಂಡವಾಳವೂ ಬರದ ಹಿನ್ನೆಲೆ ಟ್ರ್ಯಾಕ್ಟರ್ (ರೋಟರ್) ಹೊಡೆದು ಬೆಳೆ ನಾಶಗೊಳಿಸಿದ್ದಾರೆ. ಗ್ರಾಮದಲ್ಲಿ ಹತ್ತಕ್ಕೂ ಹೆಚ್ಚು ರೈತರು ಬೆಳೆ ನಾಶಪಡಿಸಿದ್ದಾರೆ.

ಒಟ್ಟಿನಲ್ಲಿ ಕೊರೊನಾ ವೈರಸ್ ಭೀತಿ ಅನ್ನದಾತರಿಗೂ ತಟ್ಟಿದ್ದು, ಇದೀಗ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಇದರಿಂದ ರೈತರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.

ABOUT THE AUTHOR

...view details