ಕರ್ನಾಟಕ

karnataka

ETV Bharat / state

ಕಡಿಮೆ ಭೂಮಿಯಲ್ಲೇ ಕಮಾಲ್​.. 2 ಎಕರೆಯಲ್ಲಿ 8 ಲಕ್ಷ ರೂ. ಆದಾಯ ಗಳಿಸಿದ ಧಾರವಾಡ ರೈತ! - 110 tonnes of banana in 2 acres of land

ಹತ್ತಾರು ಎಕರೆ ಜಮೀನು ಇದ್ದರೂ ಕೃಷಿಯಲ್ಲಿ ಕೈಚೆಲ್ಲಿದವರೇ ಹೆಚ್ಚು. ಮಾಡಿರುವ ಸಾಲ ತೀರಿಸಲಾಗದೇ ಸಾವಿನ ಮನೆಯ ಕದ ತಟ್ಟಿದ್ದಾರೆ. ಆದ್ರೆ ಇಲ್ಲೋರ್ವ ರೈತ ಇತರೆ ಅನ್ನದಾತರಿಗೆ ಮಾದರಿಯಾಗಿದ್ದಾರೆ. ಕಡಿಮೆ ಭೂಮಿಯಲ್ಲೇ ಲಕ್ಷಾಂತರ ರೂಪಾಯಿ ಆದಾಯ ಗಳಿಸಿ ಗಮನ ಸೆಳೆದಿದ್ದಾರೆ.

farmer-get-8-lacks-income-in-banana-agriculture-at-dharwada
ರಾಷ್ಟ್ರೀಯ ತೋಟಗಾರಿಕೆ ಮಿಷನ್ ನೆರವು ಪಡೆದು ಬಾಳೆ ಬೆಳೆದ ರೈತ

By

Published : Jul 1, 2021, 7:53 PM IST

ಧಾರವಾಡ: ತಾಲೂಕಿನ ಅಂಬೊಳ್ಳಿ ಗ್ರಾಮದ ರೈತರೊಬ್ಬರು ತಮ್ಮ 2 ಎಕರೆ 20 ಗುಂಟೆ ಜಮೀನಿನಲ್ಲಿ ರಾಷ್ಟ್ರೀಯ ತೋಟಗಾರಿಕೆ ಮಿಷನ್ ನೆರವು ಪಡೆದು ಬೆಳೆದ ಅಂಗಾಂಶ ಬಾಳೆಯು ಸುಮಾರು 110 ಟನ್ ಇಳುವರಿ ನೀಡಿ, 8 ಲಕ್ಷ ರೂ.ಗಳಿಗೂ ಅಧಿಕ ಆದಾಯ ನೀಡಿದೆ.

ಅಂಬೊಳ್ಳಿ ಗ್ರಾಮದ ವಿಶ್ವಂಬರ ಬನ್ಸಿ ಅವರು ತಮ್ಮ ಎರಡು ಎಕರೆ 20 ಗುಂಟೆ ಭೂಮಿಯನ್ನು ಅಂಗಾಂಶ ಬಾಳೆಯ ಹೊಸ ತೋಟವಾಗಿ ಅಭಿವೃದ್ಧಿ ಪಡಿಸಲು ತೋಟಗಾರಿಕೆ ಇಲಾಖೆ ಮೂಲಕ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಅಡಿ 2020-21 ನೇ ಸಾಲಿನಲ್ಲಿ ಹೊಸ ತೋಟ ನಿರ್ಮಿಸಿಕೊಳ್ಳಲು 30,600 ರೂ. ಅನುದಾನ ಪಡೆದಿದ್ದರು.

ಸಾಂಪ್ರದಾಯಿಕವಾಗಿ ಬೆಳೆಯುತ್ತಿದ್ದ ಕಬ್ಬು ಕೈಬಿಟ್ಟು ಬೆಳೆದ ಬಾಳೆಯು ಪ್ರತಿ ಗೊನೆಗೆ ಸರಾಸರಿ 30-35 ಕೆಜಿ ಇಳುವರಿ ನೀಡಿದೆ. ಈವರೆಗೆ 100 ರಿಂದ 110 ಟನ್ ಬಾಳೆ ಕಟಾವು ಮಾಡಿ 8,80,000 ರೂ.ಮೌಲ್ಯದ ಉತ್ಪನ್ನ ಬಂದಿದೆ. ಮೊದಲನೇ ವರ್ಷದ ಖರ್ಚು ತೆಗೆದು ಸುಮಾರು 7 ಲಕ್ಷ ರೂ.ನಿವ್ವಳ ಆದಾಯ ಬಂದಿದೆ.

ಬಾಳೆ ಬೆಳೆಗೆ ತಾಂತ್ರಿಕ ಸಲಹೆ:ಎನ್ ಹೆಚ್ ಎಂ ಅಡಿ ಹೊಸ ತೋಟಗಾರಿಕೆ ಪ್ರದೇಶ ವಿಸ್ತರಣೆಗೆ ಸಹಾಯಧನ ಹಾಗೂ ಕಾಲಕಾಲಕ್ಕೆ ಬಾಳೆ ಬೆಳೆಗೆ ತಾಂತ್ರಿಕ ಸಲಹೆಗಳನ್ನು ನೀಡಲಾಗಿದೆ ಎಂದು ಹೋಬಳಿ ಮಟ್ಟದ ತೋಟಗಾರಿಕೆ ಅಧಿಕಾರಿ ವೈ. ಎ. ಕುರುಬೆಟ್ಟ ತಿಳಿಸಿದ್ದಾರೆ.

ನರೇಗಾ ಯೋಜನೆಯಲ್ಲಿ ಸಾಕಷ್ಟು ಅವಕಾಶ: ಕೊರೊನಾದ ಈ ಸಂಕಷ್ಟದ ದಿನಗಳಲ್ಲಿಯೂ ತೋಟಗಾರಿಕೆ ಬೆಳೆಗಳನ್ನು ಬೆಳೆದು ರೈತರು ಯಶಸ್ಸು ಸಾಧಿಸಿರುವುದು ಮಾದರಿಯಾಗಿದೆ. ಹಣ್ಣು, ಹೂವಿನ‌ ತೋಟಗಳನ್ನು ಹೊಸದಾಗಿ ನಿರ್ಮಿಸಿಕೊಳ್ಳಲು ನರೇಗಾ ಯೋಜನೆಯಲ್ಲಿ ಸಾಕಷ್ಟು ಅವಕಾಶಗಳಿವೆ.

ರಿಯಾಯಿತಿ ದರದಲ್ಲಿ ವಿತರಣೆ: ಮಾವು, ಪೇರಲ, ಲಿಂಬು, ಕರಿಬೇವಿನ ಸಸಿಗಳನ್ನು ಇಲಾಖೆಯ ನರ್ಸರಿಗಳಿಂದ ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತಿದೆ. ರೈತರು ಹತ್ತಿರದ ತೋಟಗಾರಿಕೆ ಅಧಿಕಾರಿ, ಸಿಬ್ಬಂದಿಯನ್ನು ಸಂಪರ್ಕಿಸಬಹುದು ಎಂದು ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ಶಿವಯೋಗಿ ಮನವಿ ಮಾಡಿದ್ದಾರೆ.

ಓದಿ:ಶಿಕ್ಷಕರಾಗಲು ಬಯಸುವ ಆಕಾಂಕ್ಷಿಗಳಿಗೆ ಗುಡ್​ ನ್ಯೂಸ್​.. TET ಪರೀಕ್ಷೆ ದಿನಾಂಕ ಘೋಷಣೆ

ABOUT THE AUTHOR

...view details