ಹುಬ್ಬಳ್ಳಿ-ಧಾರವಾಡ :ಕೆಲವು ದಿನಗಳಿಂದ ಹುಬ್ಬಳ್ಳಿಯಾದ್ಯಂತ ಮಳೆ ಸುರಿಯುತ್ತಿದ್ದು, ಮುಂಗಾರು ಬೆಳೆಗೆ ಕಳೆಯ ಕಾಟ ಹೆಚ್ಚಾಗಿದೆ. ರೈತರಿಗೆ ಕೈತುಂಬಾ ಹಣ ನೀಡುವ ಪ್ರಮುಖ ಬೆಳೆಗಳು ಇವಾಗಿದ್ದು, ಮುಂಗಾರು ಬೆಳೆ ವಿಫಲವಾದರೆ ರೈತರು ಆರ್ಥಿಕ ಸಂಕಷ್ಟ ಎದುರಿಸಬೇಕಾಗುತ್ತದೆ.
ಮುಂಗಾರು ಬೆಳೆಗಿಂತ ಕಳೆಯೇ ಜಾಸ್ತಿ... ಸಂಕಷ್ಟದಲ್ಲಿ ರೈತರು - Hubli Monsoon Rain News
ಹುಬ್ಬಳ್ಳಿಯಾದ್ಯಂತ ಮಳೆ ಸುರಿಯುತ್ತಿದ್ದು, ಮುಂಗಾರು ಬೆಳೆಗೆ ಕಳೆಯ ಕಾಟ ಹೆಚ್ಚಾಗಿದೆ. ರೈತರಿಗೆ ಕೈ ತುಂಬ ಹಣ ನೀಡುವ ಪ್ರಮುಖ ಬೆಳೆಗಳಾಗಿದ್ದು, ಮುಂಗಾರು ಬೆಳೆ ವಿಫಲವಾದರೆ, ರೈತರು ಆರ್ಥಿಕ ಸಂಕಷ್ಟ ಎದುರಿಸಬೇಕಾಗುತ್ತದೆ.
ಹೌದು, ಈ ಬಾರಿ ಕೊರೊನಾ ಹೊಡೆತಕ್ಕೆ ಕೃಷಿ ಚಟುವಟಿಕೆಗಳು ನಲುಗಿಹೋಗಿವೆ. ಕೂಲಿಕಾರ್ಮಿಕರಿಲ್ಲದೆ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಆದರೂ ಕೂಡ ಕಷ್ಟಪಟ್ಟು ಬೆಳೆದ ಬೆಳೆಯ ನಿರೀಕ್ಷೆಯಲ್ಲಿದ್ದ ರೈತ ವರ್ಗ, ಜೂನ್ ತಿಂಗಳಲ್ಲಿ ಮಳೆಯಿಲ್ಲದೇ ಅರೆಬರೆ ತೇವಾಂಶದಲ್ಲಿ ಬಿತ್ತನೆ ಮಾಡಿದೆ. ಆನಂತರ ಜುಲೈ ತಿಂಗಳಲ್ಲಿ ಉತ್ತಮ ಮಳೆಯಾಗಿದೆ. ಪರಿಣಾಮ ನಿರೀಕ್ಷೆಯಿಟ್ಟಿದ್ದ ರೈತರಿಗೆ ಮುಂಗಾರು ಭರವಸೆ ನೀಡಿದೆ. ಆದರೆ, ಈಗ ನಿರಂತರ ಮಳೆಯಿಂದ ಹೊಲಗಳಲ್ಲಿ ಕಳೆ ಹೆಚ್ಚಾಗಿದ್ದು, ಕಳೆ ತೆಗೆಯುವುದಕ್ಕೆ ಕೂಲಿ ಕಾರ್ಮಿಕರ ಕೊರತೆ ಎದುರಾಗಿದೆ.
ಇನ್ನೊಂದೆಡೆ ಕೂಲಿ ಸಂಬಳ ಕೂಡ ಏರಿಕೆಯಾಗಿದ್ದು, ಪ್ರತಿ ಕೂಲಿ ಕಾರ್ಮಿಕರಗೆ ಕನಿಷ್ಠ 200 ರೂಪಾಯಿ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಕೊರೊನಾ ಭೀತಿ ಹಿನ್ನೆಲೆ ಹಳ್ಳಿಗಳಲ್ಲಿ ಕಾರ್ಮಿಕರು ಮನೆ ಬಿಟ್ಟು ಹೊರ ಬರುತ್ತಿಲ್ಲ. ಹೀಗಾಗಿ ರೈತರು ತಮ್ಮ ಕುಟುಂಬದವರನ್ನೇ ಕರೆದುಕೊಂಡು ಕಳೆ ತೆಗೆಯುವ ಕೆಲಸದಲ್ಲಿ ತೊಡಗಿದ್ದಾರೆ. ಆದರೂ ಸಹ ಕಳೆ ಕಡಿಮೆಯಾಗುತ್ತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಾರೆ ರೈತರು.