ಹುಬ್ಬಳ್ಳಿ:ಕೌಟುಂಬಿಕ ಕಲಹ ಹಾಗೂ ಕೂಡಿ ಬಾಳಲು ಒಪ್ಪದ ಸಹೋದರರ ನಡೆಗೆ ಬೇಸತ್ತು ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಘಟಗಿ ತಾಲೂಕಿನ ಹುಣಸಿಕಟ್ಟಿ ಗ್ರಾಮದಲ್ಲಿ ನಡೆದಿದೆ.
ಕೌಟುಂಬಿಕ ಕಲಹ: ಕೂಡಿ ಬಾಳಲು ಒಪ್ಪದ ಸಹೋದರರ ನಡೆಗೆ ಬೇಸತ್ತು ವ್ಯಕ್ತಿ ಆತ್ಮಹತ್ಯೆ! - ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ
ಕೂಡಿ ಬಾಳಲು ಒಪ್ಪದ ಸಹೋದರರ ನಡೆಗೆ ಬೇಸತ್ತು ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಸವನಗೌಡ ವೀರನಗೌಡ ಪಾಟೀಲ (30) ಮೃತ ವ್ಯಕ್ತಿ.

ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ
ಬಸವನಗೌಡ ವೀರನಗೌಡ ಪಾಟೀಲ (30) ಮೃತ ವ್ಯಕ್ತಿ. ಮನೆಯಲ್ಲಿ ಹಿರಿಯ ಸಹೋದರರು ಆಸ್ತಿಯಲ್ಲಿ ಪಾಲು ತೆಗೆದುಕೊಂಡು ಬೇರೆ ಬೇರೆಯಾಗಿದ್ದರು. ಆದರೆ ಬಸನಗೌಡ ಎಲ್ಲರೂ ಒಟ್ಟಾಗಿ ಇರೋಣ ಎಂದು ಸಹೋದರರಿಗೆ ಮನವಿ ಮಾಡಿದ್ದ. ಆದರೆ ಈತನ ಮಾತು ಯಾರು ಕೇಳದಿರುವುದರಿಂದ ಮನನೊಂದು ಕಬ್ಬಿನ ಗದ್ದೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗ್ತಿದೆ.
ಈ ಸಂಬಂಧ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.