ಕರ್ನಾಟಕ

karnataka

ETV Bharat / state

ಕೊರೊನಾ ವಿರುದ್ಧ ಜಯಿಸಿದ ಸ್ಟಾಫ್​ ನರ್ಸ್ ಕುಟುಂಬ.. - Family of Staff Nurses Healed from Corona

ಜಿಲ್ಲಾಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಸ್ಟಾಫ್​ ನರ್ಸ್​​​ ಅವರಿಗೆ ಸೋಂಕು ತಗುಲಿತ್ತು. ಅವರಿಂದ ಅವರ ಕುಟುಂಬದ ಸದಸ್ಯರಲ್ಲೂ ಸೋಂಕು ಕಾಣಿಸಿತ್ತು. ಇದೀಗ ನರ್ಸ್ ಅವರ ಇಡೀ ಕುಟುಂಬ ಕೊರೊನಾ ವಿರುದ್ಧ ಜಯಿಸಿ ಜನರಿಗೆ ಆತ್ಮವಿಶ್ವಾಸ ತುಂಬಿದ್ದಾರೆ..

Family of Staff Nurses Healed from Corona
ಕೊರೊನಾ ವಿರುದ್ಧ ಜಯಿಸಿದ ಸ್ಟಾಫ್​ ನರ್ಸ್ ಕುಟುಂಬ

By

Published : Jul 18, 2020, 8:01 PM IST

ಧಾರವಾಡ :ಜಿಲ್ಲಾಸ್ಪತ್ರೆಯ ನರ್ಸ್ ಸೇರಿ ಅವರ ಕುಟುಂಬದ ಏಳು ಜನ ಕೊರೊನಾ ವಿರುದ್ಧ ಹೋರಾಡಿ ಜಯಿಸಿದ್ದಾರೆ. ನಗರದ ಮಾಳಾಪೂರ ನಿವಾಸಿಗಳಾಗಿರುವ ಇವರು ಇದೀಗ ಗುಣಮುಖರಾಗಿದ್ದಾರೆ.

ಕೊರೊನಾದಿಂದ ಗುಣಮುಖರಾದ ಇವರನ್ನು ಮನೆಗೆ ಕಳುಹಿಸಿ 14 ದಿನಗಳ ಹೋಂ ಕ್ವಾರಂಟೈನ್‌ನಲ್ಲಿರಲು ಸೂಚಿಸಲಾಗಿದೆ. ಕೊರೊನಾ ಗೆದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಅವರ ಕುಟುಂಬದ ಸದಸ್ಯರು ಆಶಾದಾಯಕ ಮಾತುಗಳನ್ನಾಡಿದ್ದಾರೆ.

ಕೊರೊನಾ ವಿರುದ್ಧ ಜಯಿಸಿದ ಸ್ಟಾಫ್​ ನರ್ಸ್ ಕುಟುಂಬ

ಜಿಲ್ಲಾಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಸ್ಟಾಫ್​ ನರ್ಸ್​​​ ಅವರಿಗೆ ಸೋಂಕು ತಗುಲಿತ್ತು. ಅವರಿಂದ ಅವರ ಕುಟುಂಬದ ಸದಸ್ಯರಲ್ಲೂ ಸೋಂಕು ಕಾಣಿಸಿತ್ತು. ಇದೀಗ ನರ್ಸ್ ಅವರ ಇಡೀ ಕುಟುಂಬ ಕೊರೊನಾ ವಿರುದ್ಧ ಜಯಿಸಿ ಜನರಿಗೆ ಆತ್ಮವಿಶ್ವಾಸ ತುಂಬಿದ್ದಾರೆ.

ಕಳೆದ 10 ದಿನಗಳ ಹಿಂದೆ ಅವರಿಗೆ ಪಾಸಿಟಿವ್ ಕಂಡು ಬಂದಿತ್ತು. ಗುಣಮುಖರಾಗಿ ನಿನ್ನೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕೊರೊನಾ ವೈರಸ್ ತಗುಲಿದ್ರೆ ಏನು ಆಗೋದಿಲ್ಲ. ಆದರೆ, ಕಡೆಗಣಿಸಬೇಡಿ, ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಕೊರೊನಾ ವಾರಿಯರ್ ಕುಟುಂಬ, ಜನರಿಗೆ ಧೈರ್ಯ ತುಂಬಿದೆ.

ABOUT THE AUTHOR

...view details