ಕರ್ನಾಟಕ

karnataka

By

Published : Feb 24, 2021, 6:13 PM IST

ETV Bharat / state

ಧಾರವಾಡ ಬೈಪಾಸ್ ರಸ್ತೆ ಅಪಘಾತ ಪ್ರಕರಣ: ತಪ್ಪು ವರದಿ ಸಲ್ಲಿಸಿತಾ ಹೆದ್ದಾರಿ ಪ್ರಾಧಿಕಾರ?

ಧಾರವಾಡದ ಇಟ್ಟಿಗಟ್ಟಿ ಬಳಿ ಬೈಪಾಸ್​ನಲ್ಲಿ ನಡೆದ ಅಪಘಾತದ ಕುರಿತು ಹೆದ್ದಾರಿ ಪ್ರಾಧಿಕಾರ ಸುಪ್ರೀಂ ಕೋರ್ಟ್​ಗೆ ತಪ್ಪು ವರದಿ ನೀಡಿದೆ ಎಂಬ ಆರೋಪ ಕೇಳಿ ಬಂದಿದೆ.

False report to SC on Dharwad bypass road accident..?
ಸುಪ್ರೀಂ ಕೋರ್ಟ್​ಗೆ ಸುಳ್ಳು ವರದಿ ಸಲ್ಲಿಸಿತಾ ಹೆದ್ದಾರಿ ಪ್ರಾಧಿಕಾರ..?

ಧಾರವಾಡ:ನಗರದ ಬೈಪಾಸ್ ರಸ್ತೆಯಲ್ಲಿ ನಡೆದ ಅಪಘಾತದ ಕುರಿತು ವರದಿ ಕೇಳಿದ್ದ ಸುಪ್ರೀಂ ಕೋರ್ಟ್​ಗೆ ಸರ್ಕಾರ ತಪ್ಪು ವರದಿ ಸಲ್ಲಿಸಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ಧಾರವಾಡದ ಇಟ್ಟಿಗಟ್ಟಿ ಬಳಿ ಬೈಪಾಸ್​ನಲ್ಲಿ ನಡೆದ ಭೀಕರ ಅಪಘಾತದಲ್ಲಿ ಗೋವಾಕ್ಕೆ ಪ್ರವಾಸ ಹೊರಟ್ಟಿದ್ದ 12 ಜನ ದಾರುಣವಾಗಿ ಮೃತಪಟ್ಟಿದ್ದರು. ಈ ಘಟನೆ ಇಡೀ ದೇಶದ ಗಮನ ಸೆಳೆದಿತ್ತು. ಪ್ರಧಾನಿ ನರೇಂದ್ರ ಮೋದಿ ಕೂಡ ಈ ಕುರಿತು ಮರುಕ ವ್ಯಕ್ತಪಡಿಸಿದ್ದರು. ದುರ್ಘಟನೆ ನಡೆದ ಬಳಿಕ ರಸ್ತೆ ಅಗಲೀಕರಣ ಮಾಡುವಂತೆ ಧಾರವಾಡದ ಜನರು ಹಾಗೂ ಮೃತರ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದರು.

ಸುಪ್ರೀಂ ಕೋರ್ಟ್​ಗೆ ತಪ್ಪು ವರದಿ ಸಲ್ಲಿಸಿತಾ ಹೆದ್ದಾರಿ ಪ್ರಾಧಿಕಾರ?

ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಸುಪ್ರೀಂ ಕೋರ್ಟ್, ಅಪಘಾತ ಮತ್ತು ರಸ್ತೆಯ ಸ್ಥಿತಿಯ ಕುರಿತು ಫೆಬ್ರವರಿ 15ರೊಳಗೆ ವರದಿ ನೀಡುವಂತೆ ಸೂಚನೆ ನೀಡಿತ್ತು. ಈ ಹಿನ್ನೆಲೆ ಹೆದ್ದಾರಿ ಪ್ರಾಧಿಕಾರ ಕೋರ್ಟ್​ಗೆ ವರದಿ ನೀಡಿದೆ. ಆದರೆ, ವರದಿಯಲ್ಲಿ ರಸ್ತೆ ಸರಿ ಇದೆ, ವಾಹನ ಚಾಲಕನ ತಪ್ಪಿನಿಂದ ಅಪಘಾತವಾಗಿದೆ. ಜನವರಿ 15ರಂದು ಅಪಘಾತ ನಡೆದ ಸ್ಥಳದಲ್ಲಿ 20 ವರ್ಷಗಳಲ್ಲಿ ಯಾವುದೇ ಅಪಘಾತ ಸಂಭವಿಸಿಲ್ಲ ಎಂದು ತಪ್ಪು ಮಾಹಿತಿ ನೀಡಲಾಗಿದೆ. ಬೈಪಾಸ್ ರಸ್ತೆ ನಿರ್ಮಾಣವಾಗಿ 23 ವರ್ಷಗಳಲ್ಲಿ ಒಟ್ಟು 1,200 ಜನ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಓದಿ : ವಾಹನ ದಟ್ಟಣೆ: ಕಲಬುರಗಿಯಲ್ಲಿ ಪ್ರತ್ಯೇಕ ಟ್ರ್ಯಾಕ್ ಸ್ಥಾಪನೆಗೆ ಚಿಂತನೆ

ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್​​ ಶೆಟ್ಟರ್ ಅವರನ್ನು ಪ್ರಶ್ನಿಸಿದ್ರೆ, ಆ ಬಗ್ಗೆ ನನಗೆ ಗೊತ್ತಿಲ್ಲ. ವರದಿಯ ಸತ್ಯಾಸತ್ಯತೆ ಗಮನಿಸಿ ಸಮಾಲೋಚನೆ ಮಾಡುತ್ತೇನೆ ಎಂದು ಹೇಳಿದ್ದಾರೆ.

ABOUT THE AUTHOR

...view details