ಧಾರವಾಡ:ಐಐಟಿ ವಿದ್ಯಾರ್ಥಿಗಳು ಫೇಕ್ ನ್ಯೂಸ್ ಡಿಟೆಕ್ಟ್ ಆ್ಯಪ್ ಆವಿಷ್ಕಾರ ಮಾಡಿದ್ದು, 'ಫೇಕ್‌ವೀಡ್' ಹೆಸರಿನ ಆ್ಯಪ್ ಇನ್ನೆರಡು ತಿಂಗಳಲ್ಲಿ ಗ್ರಾಹಕರ ಬಳಕೆಗೆ ಬರಲಿದೆ.
ಫೇಕ್ ನ್ಯೂಸ್ ಡಿಟೆಕ್ಟ್ ಆ್ಯಪ್ ಆವಿಷ್ಕಾರ: ಧಾರವಾಡ ಐಐಟಿ ವಿದ್ಯಾರ್ಥಿಗಳ ಸಾಧನೆ - Dharwad latest News
'ಫೇಕ್‌ವೀಡ್' ಹೆಸರಿನ ಫೇಕ್ ನ್ಯೂಸ್ ಡಿಟೆಕ್ಟ್ ಆ್ಯಪ್ಅನ್ನು ಧಾರವಾಡ ಐಐಟಿ ವಿದ್ಯಾರ್ಥಿಗಳು ಆವಿಷ್ಕಾರ ಮಾಡಿದ್ದು, ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ಫೇಕ್ನ್ಯೂಸ್ ಡಿಟೆಕ್ಟ್ ಆ್ಯಪ್
ಈ ಬಗ್ಗೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ಟ್ವೀಟ್ ಮೂಲಕ ತಿಳಿಸಿದ್ದು, ಸಂತಸ ವ್ಯಕ್ತಪಡಿಸಿದ್ದಾರೆ. ಐಐಟಿ ಕಂಪ್ಯೂಟರ್ ಸೈನ್ಸ್ ವಿಭಾಗದ ಅಮನ್ ಸಿಂಗಲ್ ಮತ್ತು ತಂಡದಿಂದ ಆ್ಯಪ್ ಆವಿಷ್ಕಾರಗೊಂಡಿದೆ.
ಫೇಕ್ ನ್ಯೂಸ್ ಪತ್ತೆ ಮಾಡಿ ಸತ್ಯಾಸತ್ಯತೆ ಬಯಲಿಗೆಳೆಯುವಲ್ಲಿ ಈ ಆ್ಯಪ್ ಸಹಕಾರಿಯಾಗಲಿದೆ. ವಿಡಿಯೋ, ಆಡಿಯೋ ಮಾತ್ರವಲ್ಲ ಸುಳ್ಳು ಸುದ್ದಿಯ ಅಕ್ಷರಗಳನ್ನು ಸಹ ಆ್ಯಪ್ ಡಿಕೆಟ್ಟ್ ಮಾಡುತ್ತದೆಯಂತೆ.