ಧಾರವಾಡ: ಇಂಜಿನಿಯರಿಂಗ್ ಪರೀಕ್ಷೆ ಬರೆದ ನಕಲಿ ವಿದ್ಯಾರ್ಥಿ ಹಾಗೂ ಅಸಲಿ ವಿದ್ಯಾರ್ಥಿಗೆ ಆರು ತಿಂಗಳ ಜೈಲು ಶಿಕ್ಷೆ ಹಾಗೂ 1 ಸಾವಿರ ರೂ. ದಂಡ ವಿಧಿಸಿ ಮೂರನೇ ಹೆಚ್ಚುವರಿ ನ್ಯಾಯಾಲಯ ಆದೇಶಿಸಿದೆ.
ನೀಡಿದ ಶಿಕ್ಷೆ ಏನು?
1.ಅಸಲಿ ವಿದ್ಯಾರ್ಥಿ ಎಂದು ಸೋಗು ಹಾಕಿ ಮೋಸ ಮಾಡಿದ ಅಪರಾಧಕ್ಕಾಗಿ ಇಬ್ಬರೂ ಆರೋಪಿತರಿಗೆ ಆರು ತಿಂಗಳು ಜೈಲು ಶಿಕ್ಷೆ ತಲಾ ಒಂದು ಸಾವಿರ ದಂಡ
2. ಮೋಸ ಮಾಡಿದ ಅಪರಾಧಕ್ಕಾಗಿ ಇಬ್ಬರೂ ಆರೋಪಿತರಿಗೆ ಆರು ತಿಂಗಳು ಜೈಲು ಶಿಕ್ಷೆ ತಲಾ ಒಂದು ಸಾವಿರ ದಂಡ.
3. ದಾಖಲಾತಿ ಪೋರ್ಜರಿ ಮಾಡಿದ್ದಕ್ಕಾಗಿಇಬ್ಬರೂ ಆರೋಪಿತರಿಗೆಆರು ತಿಂಗಳು ಜೈಲು ಶಿಕ್ಷೆ ತಲಾ ಒಂದು ಸಾವಿರ ದಂಡ
4. ಮೋಸ ಮಾಡುವ ಉದ್ದೇಶಕ್ಕಾಗಿ ಪೋರ್ಜರಿ ಮಾಡಿದ ಅಪರಾಧಕ್ಕಾಗಿಇಬ್ಬರೂ ಆರೋಪಿತರಿಗೆಆರು ತಿಂಗಳು ಜೈಲು ಶಿಕ್ಷೆ ತಲಾ ಒಂದು ಸಾವಿರ ದಂಡ
2007 ನೇ ಸಾಲಿನಲ್ಲಿ ಧಾರವಾಡದ ಎಸ್‍ಡಿಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಸಲಾದ ಪರೀಕ್ಷೆ ಸಂದರ್ಭ ಅದೇ ಕಾಲೇಜಿನ ಓರ್ವ ವಿದ್ಯಾರ್ಥಿ ತನ್ನ ಬದಲಿಗೆ ಬೇರೊಬ್ಬ ಅಭ್ಯರ್ಥಿಯನ್ನು ನಕಲಿ ದಾಖಲೆಗಳನ್ನು ಸೃಷ್ಟಿಸುವ ಮೂಲಕ ಅಸಲಿ ಅಭ್ಯರ್ಥಿಯನ್ನಾಗಿ ಪರೀಕ್ಷೆ ಬರೆಸಿದ್ದರು.
ನಕಲಿ ವಿದ್ಯಾರ್ಥಿ ಮೂರನೇ ಸೆಮಿಸ್ಟರ್ ಪರೀಕ್ಷೆ ಬರೆಯುವಾಗ ಬೆಳಗಾವಿಯ ವಿಶ್ವೇಶ್ವರಯ್ಯ ಟೆಕ್ನಾಲಜಿ ಯುನಿವರ್ಸಿಟಿಯ ಅಧಿಕಾರಿಗಳು ಪರಿಶೀಲನೆ ನಡೆಸಿ ನಕಲಿ ವಿದ್ಯಾರ್ಥಿಯನ್ನ ಪತ್ತೆ ಹಚ್ಚಿದ್ದರು.
ಈತನ ವಿರುದ್ಧ ಕಾಲೇಜು ಪ್ರಾಂಶುಪಾಲರು ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ಸ್ವೀಕರಿಸಿದ ಪಿಎಸ್ಐ. ಜೆ.ಎಂ ಕಾಲಿಮಿರ್ಚಿ ಮೊಕದ್ದಮೆ ದಾಖಲಿಸಿದ್ದರು. ಈ ಬಗ್ಗೆ ತನಿಖೆ ಕೈಗೊಂಡಿದ್ದ ಎಎಸ್ಐ ಎಸ್.ಎಫ್ ದೊಡ್ಡಮನಿ, ಇನ್ಸ್ಪೆಕ್ಟರ್ ವಿಜಯ ಬಿರಾದಾರ್ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು.
ಮೂರನೇ ಹೆಚ್ಚುವರಿ ಪ್ರಧಾನ ನ್ಯಾಯಿಕ ದಂಡಾಧಿಕಾರಿ ನ್ಯಾಯಾಲಯದ ನ್ಯಾಯಾಧೀಶ ಮಹೇಶ ಚಂದ್ರಕಾಂತ ಅವರು ಇಬ್ಬರು ಆರೋಪಿತರು ತಪ್ಪಿತಸ್ಥರು ಎಂದು ತಿರ್ಮಾನಿಸಿ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ಪ್ರಕರಣದಲ್ಲಿ ಸರ್ಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ವಕೀಲ ಆರ್. ಜಿ ದೇವರೆಡ್ಡಿ ಹಾಗೂ ಅನೀಲ್ ಕುಮಾರ್ ಆರ್. ತೊರವಿ ವಕಾಲತ್ತು ವಹಿಸಿದ್ದರು.