ಕರ್ನಾಟಕ

karnataka

ETV Bharat / state

ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ ಪಡೆದ ಖದೀಮ: ಮೂವರ ಬಂಧನ - ಮೂವರ ಬಂಧನ

ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ‌ ಪಡೆದವ ಸೇರಿದಂತೆ ಆತನಿಗೆ ಸಹಕಾರ ನೀಡಿದ ಮೂವರನ್ನು ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

Fake Scorecard case
ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ ಪಡೆದ ಖದೀಮ: ಮೂವರ ಬಂಧನ

By

Published : Dec 2, 2019, 10:09 AM IST

ಹುಬ್ಬಳ್ಳಿ:ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ‌ ಪಡೆದವ ಸೇರಿದಂತೆ ಆತನಿಗೆ ಸಹಕಾರ ನೀಡಿದ ಮೂವರನ್ನು ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹಾವೇರಿ ಜಿಲ್ಲೆಯ ಹಾದ್ರಿಹಳ್ಳಿ ಗ್ರಾಮದ ಸಿದ್ದಪ್ಪ ಹೊನ್ನಪ್ಪ ಬೆಳಕಿನಹೊಂಡ ನಕಲಿ ಅಂಕಪಟ್ಟಿ ನೀಡಿ ಹುದ್ದೆ ಸೇರಿದ್ದ ಆರೋಪಿ. ಈತನಿಗೆ ಸಹಕಾರ ನೀಡಿದ ಹಾದ್ರಿಹಳ್ಳಿ ಗ್ರಾಮದ ಶಿವಕುಮಾರ್ ಉಪ್ಪಾರ, ಜೇವರ್ಗಿಯ ಕರಣಪ್ಪಗೌಡ ಪೊಲೀಸ್‌ ಪಾಟೀಲ್ ಹಾಗೂ ಕಲಬುರಗಿಯ ಶಿವಶರಣಪ್ಪ ಪಾಟೀಲ್ ಬಂಧಿತರು. ಎಸ್‌ಎಸ್‌ಎಲ್‌ಸಿಯ ನಕಲಿ ಅಂಕಪಟ್ಟಿ ಸೃಷ್ಟಿಸಿ ಕೆಪಿಟಿಸಿಎಲ್​ನಲ್ಲಿ ಕಿರಿಯ ಲೈನ್‌ಮನ್ ಹುದ್ದೆಗೆ ಸೇರಿಕೊಂಡಿದ್ದ. 2017 ರಲ್ಲಿ ಜೂನಿಯರ್ ಲೈನ್‌ಮನ್ ಹುದ್ದೆ ನೇಮಕಾತಿ ಪ್ರಕ್ರಿಯೆ ನಡೆದಿತ್ತು.
ಈ ವೇಳೆ ಸಿದ್ದಪ್ಪ ಎಸ್‌ಎಸ್‌ಎಲ್‌ಸಿ ನಕಲಿ ಅಂಕಪಟ್ಟಿ ನೀಡಿ ನೌಕರಿ ಸೇರಿಕೊಂಡಿದ್ದ. ಈ ಬಗ್ಗೆ ಅನುಮಾನಗೊಂಡು ಹಳೇ ಹುಬ್ಬಳ್ಳಿಯ ಪೊಲೀಸ್ ಠಾಣೆಯಲ್ಲಿ ಕೆಪಿಟಿಸಿಎಲ್ ಹುಬ್ಬಳ್ಳಿಯ ಕಾರ್ಯನಿರ್ವಾಹಕ ಅಭಿಯಂತರ ಗಿರೀಶ್ ಕಮಶಿಕರ ದೂರು ನೀಡಿದ್ದರು.

ಪ್ರಕರಣದ ತನಿಖೆ ಆರಂಭಿಸಿದ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ‌ಆರೋಪಿಗಳನ್ನು ಬಂಧಿಸಿ ‌ನ್ಯಾಯಾಂಗ ಬಂಧನಕ್ಕೆ ‌ಒಪ್ಪಿಸಿದ್ದಾರೆ.

ABOUT THE AUTHOR

...view details