ಕರ್ನಾಟಕ

karnataka

ETV Bharat / state

ಪಾಕ್​​​ ಪರ ಘೋಷಣೆ ಪ್ರಕರಣ: ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ - ಪಾಕ್​ ಪರ ಘೋಷಣೆ ಕೂಗಿದ ಪ್ರಕರಣ ಸುದ್ದಿ

ಪಾಕಿಸ್ತಾನ ಪರ ಘೋಷಣೆ ಕೂಗಿದ ಕಾಶ್ಮೀರಿ ವಿದ್ಯಾರ್ಥಿಗಳ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ ಮಾಡಿ‌ ನ್ಯಾಯಾಲಯ ಆದೇಶ ಹೊರಡಿಸಿದೆ.

ಪಾಕ್​ ಪರ ಘೋಷಣೆ ಕೂಗಿದ ಪ್ರಕರಣ ro-Pakistan slogan case in hubballi
ಪಾಕ್​ ಪರ ಘೋಷಣೆ ಕೂಗಿದ ಪ್ರಕರಣ

By

Published : Mar 2, 2020, 1:40 PM IST

Updated : Mar 2, 2020, 3:19 PM IST

ಹುಬ್ಬಳ್ಳಿ: ಪಾಕಿಸ್ತಾನ ಪರ ಘೋಷಣೆ ಕೂಗಿದ ಕಾಶ್ಮೀರಿ ವಿದ್ಯಾರ್ಥಿಗಳ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ ಮಾಡಿ‌ ನ್ಯಾಯಾಲಯ ಆದೇಶ ಹೊರಡಿಸಿದೆ.

ಪಾಕಿಸ್ತಾನ ಪರ ಘೋಷಣೆ ಕೂಗಿದ ಹಿನ್ನೆಲೆ ಸ್ಥಳೀಯ 5ನೇ ಜಿಲ್ಲಾ ಸತ್ರ ನ್ಯಾಯಾಲಯ ಆರೋಪಿಗಳ ಬಂಧನದ ಅವಧಿಯನ್ನು ಮಾ. 7ರವರೆಗೆ ವಿಸ್ತರಿಸಿದೆ. ದೇಶದ್ರೋಹದ ಘೋಷಣೆ ಕೂಗಿ ಫೆ. 17ರಿಂದ ನ್ಯಾಯಾಂಗ ಬಂಧನದಲ್ಲಿರುವ ಅಮೀರ್, ಬಾಸಿತ್, ತಾಲಿಬ್ ಎಂಬ ಮೂವರು ಆರೋಪಿಗಳನ್ನು ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿಡಲಾಗಿದೆ.

ಆರೋಪಿಗಳು ಸಲ್ಲಿಸಿರುವ ಜಾಮೀನು ಅರ್ಜಿ ಕುರಿತು ತಕರಾರು ಸಲ್ಲಿಸಲು ಸರ್ಕಾರಿ ವಕೀಲರಿಗೆ ನಾಲ್ಕು ದಿನ ಕಾಲಾವಧಿ ನೀಡಿ ಕೋರ್ಟ್​ ಆದೇಶಿಸಿದೆ.

Last Updated : Mar 2, 2020, 3:19 PM IST

ABOUT THE AUTHOR

...view details