ಕರ್ನಾಟಕ

karnataka

ETV Bharat / state

ವಿಶೇಷ ಪ್ಯಾಕೇಜ್​ ಘೋಷಣೆಗೆ ಆಗ್ರಹಿಸಿ  ಕಲಾವಿದರಿಂದ ವಿನೂತನ ಪ್ರತಿಭಟನೆ - ಹುಬ್ಬಳ್ಳಿಯಲ್ಲಿ ಕೊರೊನಾ ಪ್ರಕರಣಗಳು

ಹುಬ್ಬಳ್ಳಿ ನಗರದಲ್ಲಿ ಜಾನಪದ ಗೊಂಬೆ ಕುಣಿತ ಕಲಾವಿದರ ನೆರವಿಗೆ ಸರ್ಕಾರ ಧಾವಿಸಬೇಕು ಎಂದು ಗೊಂಬೆ ಕುಣಿತ ಹಾಗೂ ದಾಲಪಟದ ಮೂಲಕ ನೃತ್ಯ ಮಾಡಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

dsdsd
ಜಾನಪದ ಗೊಂಬೆ ಕುಣಿತ ಕಲಾವಿದರಿಂದ ವಿನೂತನ ಪ್ರತಿಭಟನೆ

By

Published : May 23, 2020, 8:52 PM IST

ಹುಬ್ಬಳ್ಳಿ: ಲಾಕ್​ಡೌನ್ ಹಿನ್ನೆಲೆ ಜಾನಪದ ಕಲಾವಿದರ ಜೀವನ ಅಕ್ಷರಶಃ ಸಂಕಷ್ಟಕ್ಕೆ ಸಿಲುಕಿದ್ದು, ಕಲಾವಿದರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವಂತೆ ಆಗ್ರಹಿಸಿ ವಿಶಿಷ್ಟವಾಗಿ ಪ್ರತಿಭಟನೆ ನಡೆಸಲಾಯಿತು.

ಜಾನಪದ ಗೊಂಬೆ ಕುಣಿತ ಕಲಾವಿದರಿಂದ ವಿನೂತನ ಪ್ರತಿಭಟನೆ

ನಗರದಲ್ಲಿ ಜಾನಪದ ಗೊಂಬೆ ಕುಣಿತ ಕಲಾವಿದರ ಸಂಘ ಹಾಗೂ ಚಾಮುಂಡೇಶ್ವರಿ ದಾಲಪಟ ಕಲಾವಿದರ ಸಂಘದಿಂದ ವಿಶಿಷ್ಟ ವೇಷ ಭೂಷಣ ಧರಿಸಿ ತಹಶೀಲ್ದಾರ್​ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ದೇಶಾದ್ಯಂತ ಲಾಕ್​ಡೌನ್ ಘೋಷಣೆ ಮಾಡಿದ ಬೆನ್ನಲ್ಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿವಿಧ ಸಮುದಾಯಗಳಿಗೆ ಹಾಗೂ ಜನತೆಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿರುವುದು ಸ್ವಾಗತಾರ್ಹವಾಗಿದೆ. ನಮ್ಮ ನೆರವಿಗೂ ಸರ್ಕಾರ ಧಾವಿಸಬೇಕು ಎಂದು ನೃತ್ಯದ ಮೂಲಕ ವಿನೂತನವಾಗಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

ABOUT THE AUTHOR

...view details