ಕರ್ನಾಟಕ

karnataka

ETV Bharat / state

ರಾಜ್ಯದ ಹಲವೆಡೆ ಮತಯಂತ್ರಗಳ ದೋಷ... ಕಾದು ನಿಂತ ಮತದಾರರು - news kannada

ರಾಜ್ಯದ ಹಲವೆಡೆ ಮತಯಂತ್ರಗಳ ದೋಷ ಕಂಡು ಬಂದಿದ್ದರಿಂದ ಮತದಾನವನ್ನು ಕೆಲಕಾಲ ಸ್ಥಗಿತಗೊಳಿಸಲಾಗಿದೆ. ಚುನಾವಣಾ ಸಿಬ್ಬಂದಿ ಮತಯಂತ್ರ ದುರಸ್ತಿಯಲ್ಲಿ ತೊಡಗಿದ್ದು ಮತದಾರರು ಸರದಿ ಸಾಲಿನಲ್ಲಿ ನಿಂತು ಕಾಯುತ್ತಿದ್ದಾರೆ.

ಮತಯಂತ್ರಗಳ ದೋಷದಿಂದ ಕಂಗಾಲಾದ ಉತ್ಸಾಹಿ ಮತದಾರರು

By

Published : Apr 23, 2019, 9:08 AM IST

ರಾಯಚೂರು/ದಾವಣಗೆರೆ/ವಿಜಯಪುರ/ಹುಬ್ಬಳ್ಳಿ:ರಾಜ್ಯದ ಉತ್ತರ ಭಾಗದಲ್ಲಿ ಇಂದು 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ಪ್ರಾರಂಭವಾಗಿದ್ದು ಇದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಂಡಿತ್ತು. ಇದರ ನಡುವೆಯೂ ಹಲವು ಕಡೆಗಳಲ್ಲಿ ಮತಯಂತ್ರಗಳ ದೋಷ ಕಂಡುಬಂದಿದೆ.

ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಮತಯಂತ್ರದಲ್ಲಿ ದೋಷ ಕಂಡುಬಂದಿದ್ದರಿಂದ ಮತದಾನವನ್ನು ಸ್ಥಗಿತಗೊಳಿಸಲಾಯಿತು. ವೆಂಕಟೇಶ್ವರ್​ ಹೈಸ್ಕೂಲಿನ ಮತಗಟ್ಟೆ 156ರಲ್ಲಿ ಈ ದೋಷ ಕಂಡುಬಂದಿದ್ದು ಸಿಬ್ಬಂದಿ ಮತಯಂತ್ರ ದುರಸ್ಥಿಯಲ್ಲಿ ತೊಡಗಿದ್ದಾರೆ.

ಮತಯಂತ್ರಗಳ ದೋಷದಿಂದ ಕಂಗಾಲಾದ ಉತ್ಸಾಹಿ ಮತದಾರರು

ದಾವಣಗೆರೆಯಲ್ಲಿಯೂ ಇದೇ ಸಮಸ್ಯೆ ಕಂಡು ಬಂತು. ಮತಗಟ್ಟೆಯ ಇವಿಎಂನಲ್ಲಿ ದೋಷ ಕಂಡುಬಂದಿದ್ದರಿಂದ ಸಮಸ್ಯೆ ಉಂಟಾಗಿದೆ. ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಮತಗಟ್ಟೆ ಸಂಖ್ಯೆ 261ರಲ್ಲಿ ಮತಯಂತ್ರದಲ್ಲಿ ದೋಷ ಕಾಣಿಸಿಕೊಂಡಿತು. ಮತದಾನದ ಅವಧಿ ಪ್ರಾರಂಭವಾದರೂ ಮತಯಂತ್ರ ಶುರುವಾಗದ್ದರಿಂದ ಮತದಾರರು ಸಾಲಿನಲ್ಲಿ ನಿಲ್ಲಬೇಕಾಯಿತು. ಇದೀಗ ಸಿಬ್ಬಂದಿ ಮತಯಂತ್ರ ದುರಸ್ಥಿಯಲ್ಲಿ ತೊಡಗಿದ್ದಾರೆ.

ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿಯೂ ಇದೇ ಸಮಸ್ಯೆ ಕಂಡುಬಂದಿತು. ಮತಯಂತ್ರದಲ್ಲಿ ದೋಷ ಕಾಣಿಸಿಕೊಂಡಿದ್ದರ ಹಿನ್ನೆಲೆ ಚುನಾವಣಾ ಸಿಬ್ಬಂದಿ ವಿವಿಪ್ಯಾಟ್​ ಬದಲಾಯಿಸಿದರು. ಗಂಗಾಧರ ನಗರ ಕೆಡಿಒ ಶಾಲೆಯ ಬೂತ್ ​ಸಂಖ್ಯೆ 84 ಹಾಗೂ ನಾಗಶೆಟ್ಟಿ ಕೊಪ್ಪದ ಬೂತ್​ ನಂಬರ್ 131ರಲ್ಲಿ ಈ ಸಮಸ್ಯೆ ಕಂಡುಬಂದಿದ್ದು ಕೆಲ ಕಾಲ ಮತದಾನವನ್ನು ಸ್ಥಗಿತಗೊಳಿಸಲಾಯಿತು. ಅಲ್ಲದೆ ಗದಗ ಮತ್ತು ಧಾರವಾಡದಲ್ಲಿಯೂ ಮತಯಂತ್ರಗಳ ದೋಷ ಕಾಣಿಸಿಕೊಂಡಿದೆ.

ABOUT THE AUTHOR

...view details