ಧಾರವಾಡ: ದೇಶಾದ್ಯಂತ ಕೊರೊನಾ ವೈರಸ್ ಭೀತಿ ಹಿನ್ನೆಲೆ, ಜಿಲ್ಲೆಯಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದರು.
ಕೊರೊನಾ ಎದುರಿಸಲು ಧಾರವಾಡದಲ್ಲಿ ಸಕಲ ಸಿದ್ಧತೆ: ದೀಪಾ ಚೋಳನ್ - ಧಾರವಾಡದಲ್ಲಿ ಯಾವುದೇ ಪ್ರಕರಣ ಕಂಡು ಬಂದಿಲ್ಲ
ದೇಶಾದ್ಯಂತ ಕೊರೊನಾ ವೈರಸ್ ಭೀತಿ ಹಿನ್ನೆಲೆ ಧಾರವಾಡದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
![ಕೊರೊನಾ ಎದುರಿಸಲು ಧಾರವಾಡದಲ್ಲಿ ಸಕಲ ಸಿದ್ಧತೆ: ದೀಪಾ ಚೋಳನ್ ದೀಪಾ ಚೋಳನ್](https://etvbharatimages.akamaized.net/etvbharat/prod-images/768-512-6395318-thumbnail-3x2-uyvyu.jpg)
ದೀಪಾ ಚೋಳನ್
ಈ ಕುರಿತು ಮಾತನಾಡಿರುವ ಜಿಲ್ಲಾಧಿಕಾರಿ ದೀಪಾ ಚೋಳನ್, ಧಾರವಾಡ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಯಾವುದೇ ಪ್ರಕರಣ ಕಂಡು ಬಂದಿಲ್ಲ. ವೈರಸ್ ಕುರಿತು ಜನರಿಗೆ ಹೆಚ್ಚು ತಿಳಿವಳಿಕೆ ಮೂಡಿಸುತ್ತಿದ್ದೇವೆ ಎಂದರು.
ಮಾದ್ಯಮಗಳಿಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ದೀಪಾ ಚೋಳನ್
ಸೋಂಕು ಇರುವ ವ್ಯಕ್ತಿ ಬಳಿ ಹೋದರೆ ಮಾತ್ರ ಈ ವೈರಸ್ ಬರುತ್ತೆ. ಇದು ಗಾಳಿಯಲ್ಲಿ ಹರಡುವಂತಹದಲ್ಲ. ಎಲ್ಲರೂ ಮಾಸ್ಕ್ ಹಾಕಿಕೊಳ್ಳಬೇಕಿಲ್ಲ ಯಾರಿಗೆ ನೆಗಡಿ, ಶೀತ ಇರುತ್ತೆ ಅವರು ಮಾತ್ರ ಮಾಸ್ಕ್ ಹಾಕಿಕೊಳ್ಳಬೇಕು. ಧಾರವಾಡ ಜಿಲ್ಲೆಯ ಜನ ಭಯ ಪಡಬೇಕಾಗಿಲ್ಲ ಎಂದು ಧೈರ್ಯ ತುಂಬಿದ್ದಾರೆ.