ಕರ್ನಾಟಕ

karnataka

ETV Bharat / state

ಈಟಿವಿ ಭಾರತ ಇಂಪ್ಯಾಕ್ಟ್​​: ಹು-ಧಾ ಮಹಾನಗರ ಪಾಲಿಕೆಯಿಂದ ಚೆನ್ನಮ್ಮನ ಪುತ್ಥಳಿಗೆ ಕಾಯಕಲ್ಪ - ಈಟಿವಿ ಭಾರತ ಇಂಪ್ಯಾಕ್ಟ

ಸುಮಾರು 40 ವರ್ಷಗಳ ಹಿಂದೆ ನಿರ್ಮಾಣನಗೊಂಡ ಪುತ್ಥಳಿಯ ತಳಭಾಗದ ಬೆಸಮೆಂಟ್​ಗೆ ಹೊಂದಿಸಿದ ಕಲ್ಲುಗಳು ಹೊರಗೆ ಚಾಚಿದ್ದವು. ಈ ಕುರಿತು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿರುವ ಕುರಿತು ನಮ್ಮ ಈಟಿವಿ ಭಾರತ ವೆಬ್​ಚಾನಲ್​ನಲ್ಲಿ ವಿಸ್ತೃತ ವರದಿ ಮಾಡಲಾಗಿತ್ತು. ಈ ವರದಿಯಿಂದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಎಚ್ಚೆತ್ತುಕೊಂಡಿದ್ದು, ಇದೀಗ ಪುತ್ಥಳಿ ದುರಸ್ತಿಗೆ ಮುಂದಾಗಿದೆ.

ಚೆನ್ನಮ್ಮ ಪುತ್ಥಳಿ

By

Published : Aug 14, 2019, 12:53 PM IST

Updated : Aug 14, 2019, 12:59 PM IST

ಹುಬ್ಬಳ್ಳಿ:ವಾಣಿಜ್ಯ ನಗರಿ, ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂದೇ ಖ್ಯಾತಿಯಾಗಿದೆ ಹುಬ್ಬಳ್ಳಿಯ ಕಿತ್ತೂರು ಚೆನ್ನಮ್ಮ ಸರ್ಕಲ್​. ಇಲ್ಲಿರುವ ವೀರರಾಣಿ ಚೆನ್ನಮ್ಮನ ಪುತ್ಥಳಿಯ ಸುತ್ತಮುತ್ತ ಬಿರುಕು ಕಾಣಿಸಿದ್ದು, ಆತಂಕಕ್ಕೆ ಕಾರಣವಾಗಿದೆ ಎಂಬ ವರದಿಯನ್ನು ಈಟಿವಿ ಭಾರತ ಜು. 24 ರಂದು ಪ್ರಕಟಿಸಲಾಗಿತ್ತು.

ಹುಬ್ಬಳ್ಳಿಯ ಮುಕುಟ ಚೆನ್ನಮ್ಮನ ಪುತ್ಥಳಿ ಶಿಥಿಲ... ಸಾರ್ವಜನಿಕರಿಂದ ಆಕ್ರೋಶ

ಈ ವರದಿಯಿಂದ ಎಚ್ಚೆತ್ತುಕೊಂಡಿರುವ ಮಹಾನಗರ ಪಾಲಿಕೆ ಅಧಿಕಾರಿಗಳು ಕೊನೆಗೂ ಪುತ್ಥಳಿಯ ಕೆಳಭಾಗದಲ್ಲಿನ‌ ಬಿರುಕುಗಳಿಗೆ ತೇಪೆ ಹಾಕುವ ಕೆಲಸ ಮಾಡಿದ್ದಾರೆ. ಸುಮಾರು 40 ವರ್ಷಗಳ ಹಿಂದೆ ನಿರ್ಮಾಣನಗೊಂಡಿರುವ ಪುತ್ಥಳಿಯ ತಳಭಾಗದ ಬೇಸಮೆಂಟ್​ಗೆ ಹೊಂದಿಸಿದ ಕಲ್ಲುಗಳು ಹೊರಗೆ ಚಾಚಿದ್ದವು. ಹೀಗಾಗಿ ಚೆನ್ನಮ್ಮ ಮೂರ್ತಿಗೆ ಅಪಾಯವಾಗುವ ಸಾಧ್ಯತೆ ಹೆಚ್ಚಾಗಿದೆ, ಪುತ್ಥಳಿಯ ಆವರಣ ಸಂಪೂರ್ಣ ಶಿಥಿಲಗೊಂಡಿದ್ದು ಅನಾಹುತಕ್ಕೆ ಎಡೆ ಮಾಡಿಕೊಡುತ್ತಿದೆ ಎಂಬ ವರದಿ ಪ್ರಕಟಿಸಿತ್ತು.

ಚೆನ್ನಮ್ಮ ಪುತ್ಥಳಿ

'ಹುಬ್ಬಳ್ಳಿಯ ಮುಕುಟ ಚೆನ್ನಮ್ಮನ ಪುತ್ಥಳಿ ಶಿಥಿಲ... ಸಾರ್ವಜನಿಕರಿಂದ ಆಕ್ರೋಶ' ಎಂಬ ತಲೆಬರಹದಡಿ ವಿಸ್ತೃತ ವರದಿ ಪ್ರಸಾರ ಮಾಡಲಾಗಿತ್ತು. ಈ ವರದಿಗೆ ಸ್ಪಂದಿಸಿರುವ ಪಾಲಿಕೆ ಅಧಿಕಾರಿಗಳು ಈಗ ದುರಸ್ತಿ ಕೆಲಸ ಮಾಡಿಸಿದ್ದಾರೆ.

ಅಧಿಕಾರಿಗಳು ಪುತ್ಥಳಿ ತಳಪಾಯಕ್ಕೆ ಹಾಕಿದ‌ ಕಲ್ಲುಗಳನ್ನು ಹೊಂದಿಸುವುದರ ಜೊತೆಗೆ ಸಿಮೆಂಟ್ ಕೆಲಸ ಮಾಡಿಸಿದ್ದಾರೆ. ಈಟಿವಿ ಭಾರತ ವರದಿಗೆ ಸ್ಪಂದಿಸಿ, ಜನರ ಆತಂಕ ದೂರ ಮಾಡಿರುವ ಅಧಿಕಾರಿಗಳಿಗೆ ಧನ್ಯವಾದ.

Last Updated : Aug 14, 2019, 12:59 PM IST

ABOUT THE AUTHOR

...view details