ಕರ್ನಾಟಕ

karnataka

ETV Bharat / state

ಕಸದಲ್ಲಿ ರಸ ತೆಗೆಯುವ ಮಹಾನಗರ ಪಾಲಿಕೆ ವಿನೂತನ ಪ್ರಯತ್ನ.. ಟೊರಿಫೈಡ್ ಚಾರ್ಕೋಲ್ ಘಟಕ ಸ್ಥಾಪನೆ - Hubli Update News

ಘಟಕವು ನಿತ್ಯ 200 ಟನ್ ತ್ಯಾಜ್ಯ ಬಳಸಿ 100 ಟನ್ ಟೊರಿಫೈಡ್ ಚಾರ್ಕೋಲ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆಯಂತೆ. 1 ವರ್ಷದೊಳಗೆ ಘಟಕ ಕಾರ್ಯಾಚರಣೆ ಮಾಡಲಿದೆ. ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆ ಕಾಮಗಾರಿ ಸ್ಥಗಿತಗೊಳಿಸಲಾಗಿದೆ..

Establishment of Torified Charcoal Unit at Hubli
ಟೊರಿಫೈಡ್ ಚಾರ್ಕೋಲ್ ಘಟಕ ಸ್ಥಾಪನೆ

By

Published : Sep 30, 2020, 3:25 PM IST

Updated : Sep 30, 2020, 3:30 PM IST

ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಿರುವ ಹು-ಧಾ ಅವಳಿನಗರದಲ್ಲಿ ತ್ಯಾಜ್ಯ ವಿಲೇವಾರಿ ಮಾಡುವುದೇ ಒಂದು ದೊಡ್ಡ ತಲೆನೋವು. ತ್ಯಾಜ್ಯ ವಿಲೇವಾರಿ ಜೊತೆಗೆ ಕಸದಲ್ಲಿ ರಸ ತೆಗೆಯುವ ವಿನೂತನ ಪ್ರಯೋಗವೊಂದನ್ನು ಮಹಾನಗರ ಪಾಲಿಕೆ ಕೈಗೆತ್ತಿಕೊಂಡಿದೆ.

ನಗರದಲ್ಲಿನ ಘನ ತ್ಯಾಜ್ಯ ಬಳಸಿ ಉಷ್ಣ ವಿದ್ಯುತ್ ಉತ್ಪಾದನೆಯಲ್ಲಿ ಕಲ್ಲಿದ್ದಲಿಗೆ ಪರ್ಯಾಯ ಬಳಕೆಯಾಗುವ ಟೊರಿಫೈಡ್ ಚಾರ್ಕೋಲ್ (ಇದ್ದಿಲು) ಉತ್ಪಾದನಾ ಘಟಕ ಹುಬ್ಬಳ್ಳಿಯ ಗಬ್ಬೂರಿನಲ್ಲಿ ತಲೆ ಎತ್ತಲಿದೆ. ತ್ಯಾಜ್ಯದ ಮೂಲಕ ಇಂಧನ ತಯಾರಿಕೆಗೆ ಮಹಾನಗರ ಪಾಲಿಕೆ ಮುಂದಾಗಿದೆ.

ಕೇಂದ್ರ ಸರ್ಕಾರದ ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮ (ಎನ್​ಟಿಪಿಸಿ)ದ ವಿದ್ಯುತ್ ವ್ಯಾಪಾರ ಕೇಂದ್ರವು 45 ಕೋಟಿ ರೂ. ವೆಚ್ಚದಲ್ಲಿ ಘಟಕ ಸ್ಥಾಪಿಸಲಿದೆ. ಹು- ಧಾ ಮಹಾನಗರ ಪಾಲಿಕೆ ಗಬ್ಬೂರಿನಲ್ಲಿರುವ ತನ್ನ ಒಡೆತನದ 12 ಎಕರೆ ಜಾಗ ನೀಡಲಿದೆ. ರಾಜ್ಯದಲ್ಲಿಯೇ ಮೊದಲ ಟೊರಿಫೈಡ್ ಚಾರ್ಕೋಲ್ ಉತ್ಪಾದಿಸುವ ಘಟಕ ಹುಬ್ಬಳ್ಳಿಯಲ್ಲಿ ನಿರ್ಮಾಣವಾಗುತ್ತಿರುವುದು ವಿಶೇಷ.

ಟೊರಿಫೈಡ್ ಚಾರ್ಕೋಲ್ ಘಟಕ ಸ್ಥಾಪನೆ

ಈಗಾಗಲೇ ಈ ತಂತ್ರಜ್ಞಾನ ಉತ್ತರಪ್ರದೇಶದ ವಾರಣಾಸಿ, ಮಹಾರಾಷ್ಟ್ರದ ನಾಸಿಕ್​ದಲ್ಲಿದೆ. ಪುಣೆಯಲ್ಲಿ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಘಟಕವಿದೆ. ಉಷ್ಣ ವಿದ್ಯುತ್ ಉತ್ಪಾದನೆಯಲ್ಲಿ ಕಲ್ಲಿದ್ದಲನ್ನು ಇಂಧನವಾಗಿ ಬಳಕೆ ಮಾಡಲಾಗುತ್ತಿದೆ. ಸದ್ಯ ಪರಿಸರ ಸಂಬಂಧಿ ಕಾನೂನು ಕಠಿಣವಾಗಿರುವುದರಿಂದ ಕಾಲ ಕ್ರಮೇಣ ಕಲ್ಲಿದ್ದಲು ಲಭ್ಯತೆ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ಹಾಗಾಗಿ, ಉಷ್ಣ ವಿದ್ಯುತ್ ಉತ್ಪಾದನೆಯಲ್ಲಿ ಕಲ್ಲಿದ್ದಲಿಗೆ ಪರ್ಯಾಯವಾಗಿ ಟೊರಿಫೈಡ್ ಚಾರ್ಕೋಲ್ ಬಳಕೆಗೆ ತರಲಾಗಿದೆ. ತ್ಯಾಜ್ಯದಿಂದ ಟೊರಿಫೈಡ್ ಚಾರ್ಕೋಲ್ ತಯಾರಿಸುವ ಮಾರ್ಗ ಕಂಡುಕೊಳ್ಳಲಾಗಿದೆ. ತ್ಯಾಜ್ಯದಿಂದ ಟೊರಿಫೈಡ್ ಚಾರ್ಕೋಲ್ ಉತ್ಪಾದಿಸುವ ಘಟಕಕ್ಕೆ ಹು-ಧಾ ಮಹಾನಗರ ಪಾಲಿಕೆ ನಿತ್ಯ 200 ಟನ್ ಘನ ತ್ಯಾಜ್ಯ ನೀಡಲಿದೆ. ಹುಬ್ಬಳ್ಳಿ ನಗರದಲ್ಲಿ ನಿತ್ಯ 300 ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ.

ಘಟಕ ನಿರ್ವಹಣೆಗೆ ಬೇಕಾಗುವ ನೀರು ಪೂರೈಕೆ ವ್ಯವಸ್ಥೆಯನ್ನು ಪಾಲಿಕೆ ಕಲ್ಪಿಸಲಿದೆ. ಈ ಸಂಬಂಧ ಪಾಲಿಕೆ ಎನ್​ಟಿಪಿಸಿ ನಡುವೆ 30 ವರ್ಷಗಳ ಕರಾರು ಏರ್ಪಟ್ಟಿದೆ. ಘಟಕವು ನಿತ್ಯ 200 ಟನ್ ತ್ಯಾಜ್ಯ ಬಳಸಿ 100 ಟನ್ ಟೊರಿಫೈಡ್ ಚಾರ್ಕೋಲ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆಯಂತೆ. 1 ವರ್ಷದೊಳಗೆ ಘಟಕ ಕಾರ್ಯಾಚರಣೆ ಮಾಡಲಿದೆ. ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ನೀತಿ ಸಂಹಿತೆ ಪೂರ್ಣಗೊಂಡ ಹಿನ್ನೆಲೆ ಟೊರಿಫೈಡ್ ಚಾರ್ಕೋಲ್ ಉತ್ಪಾದಿಸುವ ಘಟಕದ ನಿರ್ಮಾಣಕ್ಕೆ ಚಾಲನೆ ನೀಡಲಾಗುತ್ತಿದೆ.

Last Updated : Sep 30, 2020, 3:30 PM IST

ABOUT THE AUTHOR

...view details