ಧಾರವಾಡ: ಲಾಕ್ಡೌನ್ ಆದೇಶ ಹಿನ್ನೆಲೆ ಯಾರೂ ಕೂಡ ಅನಾವಶ್ಯಕವಾಗಿ ಹೊರ ಬರುವಂತಿಲ್ಲ. ಆದರೆ, ಇದರಲ್ಲೂ ಕೆಲವರು ಕುಚೇಷ್ಟೆ ತೋರಿದ್ದಾರೆ.
ನಕಲಿ ಪಾಸ್ ಮುಖಾಂತರ ಎಪಿಎಂಸಿಗೆ ಎಂಟ್ರಿ.. 100ಕ್ಕೂ ಹೆಚ್ಚು ಪಾಸ್ ವಶ.. - Duplicate Pass in Dharwad
ತರಕಾರಿ ವ್ಯಾಪಾರಿಗಳಿಗೆ ಅನುಕೂಲವಾಗಲಿ ಅನ್ನುವ ಉದ್ದೇಶದಿಂದ ನೀಡಿರುವ ಪಾಸ್ ಗಳನ್ನು ವ್ಯಾಪಾರಿಗಳು ದುರುಪಯೋಗಪಡಿಸಿಕೊಂಡಿದ್ದಾರೆ.
ನಕಲಿ ಪಾಸ್ ಮುಖಾಂತರ ಎಪಿಎಂಸಿಗೆ ಎಂಟ್ರಿ
ತರಕಾರಿ ವ್ಯಾಪಾರಿಗಳಿಗೆ ಅನುಕೂಲವಾಗಲಿ ಅನ್ನುವ ಉದ್ದೇಶದಿಂದ ನೀಡಿರುವ ಪಾಸ್ಗಳನ್ನು ವ್ಯಾಪಾರಿಗಳು ದುರುಪಯೋಗಪಡಿಸಿಕೊಂಡಿದ್ದಾರೆ. ಈ ಪಾಸ್ ರೀತಿಯಲ್ಲಿಯೇ ಹಲವಾರು ಜನ ನಕಲಿ ಪಾಸ್ಗಳನ್ನು ಸೃಷ್ಟಿ ಮಾಡಿಕೊಂಡು ಎಪಿಎಂಸಿ ಮಾರುಕಟ್ಟೆಗೆ ಬರುತ್ತಿದ್ದಾರೆ.
ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಪಾಸ್ಗಳನ್ನು ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ನೂರಕ್ಕೂ ಹೆಚ್ಚು ನಕಲಿ ಪಾಸ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಉಪನಗರ ಠಾಣೆ ಪೊಲೀಸರಿಂದ ಪರಿಶೀಲನೆ ನಡೆಸಲಾಗುತ್ತಿದೆ.