ಕರ್ನಾಟಕ

karnataka

ETV Bharat / state

ಸರ್ಕಾರಿ ಜಾಗ ಅತಿಕ್ರಮಣ : ಧಾರವಾಡ ಜಿಲ್ಲೆಯಲ್ಲಿದೆ ಸಾಕಷ್ಟು ಪ್ರಕರಣಗಳು! - ಸರ್ಕಾರಿ ಜಮೀನು ಒತ್ತುವರಿ

ಕೆಲ ಬಾರಿ ಸಾರ್ವಜನಿಕರಿಂದಲೇ ದೂರು ಬರುತ್ತವೆ. ಇನ್ನು ಕೆಲ ಸಲ ಅಧಿಕಾರಿಗಳು ಭೇಟಿ ನೀಡಿ‌ ಅತಿಕ್ರಮಣ ಪತ್ತೆ ಮಾಡಿ‌ ಹದ್ದುಬಸ್ತು ಮಾಡುತ್ತಾರೆ. ನರೇಗಾ ಯೋಜನೆಯಲ್ಲಿ ತಡೆಗೋಡೆ, ಬೇಲಿ ಹಾಕುವ ಕೆಲಸ ಮಾಡಲಾಗುತ್ತಿದೆ..

encroachment of government land cases of darwada
ಸರ್ಕಾರಿ ಜಾಗ ಅತಿಕ್ರಮಣ: ಧಾರವಾಡ ಜಿಲ್ಲೆಯಲ್ಲಿವೆ ಸಾಕಷ್ಟು ಪ್ರಕರಣಗಳು!

By

Published : Apr 3, 2021, 4:09 PM IST

ಧಾರವಾಡ: ಧಾರವಾಡ ಜಿಲ್ಲೆಯಲ್ಲಿ ಸಾಕಷ್ಟು ಸರ್ಕಾರಿ ಜಮೀನು ಭೂಗಳ್ಳರ ಪಾಲಾಗಿದೆ. ಬಹಳಷ್ಟು ಪ್ರಕರಣಗಳು ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣಗಳು ನಡೆಯುತ್ತಿವೆ ಎಂದು ಉಪವಿಭಾಗಾಧಿಕಾರಿ ಡಾ. ಗೋಪಾಲಕೃಷ್ಣ ಮಾಹಿತಿ ನೀಡಿದ್ದಾರೆ.

ಸರ್ಕಾರಿ ಜಾಗ ಅತಿಕ್ರಮಣ ಕುರಿತು ಪ್ರತಿಕ್ರಿಯೆ

ಈಟಿವಿ ಭಾರತದೊಂದಿಗೆ ಮಾತನಾಡಿರುವ ಅವರು, ಸರ್ಕಾರದ ಜಮೀನು ಅತಿಕ್ರಮಣಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ 279 ಪ್ರಕರಣ, ಹುಬ್ಬಳ್ಳಿಯಲ್ಲಿ 724 ಪ್ರಕರಣ, ಕುಂದಗೋಳದಲ್ಲಿ 13 ಪ್ರಕರಣ ದಾಖಲಾಗಿವೆ. ಕಲಘಟಗಿ ಹಾಗೂ ನವಲಗುಂದದಲ್ಲಿ ಯಾವುದೇ ರೀತಿಯ ಸರ್ಕಾರಿ ಜಮೀನು ಅತಿಕ್ರಮಣವಾಗಿಲ್ಲವೆಂದು ತಿಳಿಸಿದ್ದಾರೆ.

ಧಾರವಾಡದಲ್ಲಿ ಕೃಷಿ ಭೂಮಿ ಹೆಚ್ಚು ಅತಿಕ್ರಮಣವಾಗಿರುವುದು ಕಂಡು ಬಂದಿದೆ. ಒಂದರಿಂದ ನಾಲ್ಕು ಎಕರೆವರೆಗೆ ಜಮೀನು ಅತಿಕ್ರಮಣ ಮಾಡಿಕೊಂಡಿದ್ದಾರೆ. ಇನ್ನು, ಹುಬ್ಬಳ್ಳಿಯಲ್ಲಿ ಪ್ಲಾಟ್ ವೈಸ್ ಜಮೀನುಗಳು ಅತಿಕ್ರಮಣವಾಗಿವೆ. ಕುಂದಗೋಳದಲ್ಲಿ ಸಹ ಸರ್ಕಾರದ ಜಮೀನು ಅತಿಕ್ರಮಣ ಮಾಡಿಕೊಳ್ಳಲಾಗಿದೆ. ಅಲ್ಲಿ 13 ಪ್ರಕರಣಗಳು ದಾಖಲಾಗಿ ವಿಶೇಷ ನ್ಯಾಯಾಲಯದಲ್ಲಿವೆ ಎಂದು ತಿಳಿಸಿದರು.

ಅತಿಕ್ರಮಣಕ್ಕೆ ನಿಯಂತ್ರಣ :ಜಿಲ್ಲೆಯಲ್ಲಿ ಸರ್ಕಾರಿ ಜಮೀನು ಅತಿಕ್ರಮಣ ನಿಯಂತ್ರಿಸಲು ಆಗಾಗ ಕಂದಾಯ ಅಧಿಕಾರಿಗಳು ಭೇಟಿ‌ ನೀಡಿರುತ್ತಾರೆ. ಗ್ರಾಮೀಣ ಭಾಗದಲ್ಲಿ ಸರ್ಕಾರಿ ಜಮೀನು ಕಡಿಮೆಯಾಗುತ್ತಾ ಬರುತ್ತಿದೆ. ಸರ್ಕಾರಕ್ಕೆ ಬೇಕಾದ ಕೆಲಸಗಳಿಗೆ ಸಹ ಖಾಸಗಿ‌ ಜಮೀನು ಖರೀದಿ ಮಾಡುವಂತಹ ಸ್ಥಿತಿ ನಿರ್ಮಾಣಗೊಂಡಿದೆ ಎಂದು ತಿಳಿಸಿದರು.

ಕೆಲ ಬಾರಿ ಸಾರ್ವಜನಿಕರಿಂದಲೇ ದೂರು ಬರುತ್ತವೆ. ಇನ್ನು ಕೆಲ ಸಲ ಅಧಿಕಾರಿಗಳು ಭೇಟಿ ನೀಡಿ‌ ಅತಿಕ್ರಮಣ ಪತ್ತೆ ಮಾಡಿ‌ ಹದ್ದುಬಸ್ತು ಮಾಡುತ್ತಾರೆ. ನರೇಗಾ ಯೋಜನೆಯಲ್ಲಿ ತಡೆಗೋಡೆ, ಬೇಲಿ ಹಾಕುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ:ತುಮಕೂರು: ಕುಡಿಯುವ ನೀರಿನ ಅಭಾವ ಉಂಟಾಗದಂತೆ ಕ್ರಮ

ಮುಂದಿನ ದಿನಗಳಲ್ಲಿ ಸರ್ಕಾರಿ ಜಮೀನು ಅತಿಕ್ರಮಣ ಹಾಗೂ ದುರುಪಯೋಗ ಕಂಡು ಬಂದ್ರೆ ಅಂತವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಉಪವಿಭಾಗಾಧಿಕಾರಿ ಡಾ. ಗೋಪಾಲಕೃಷ್ಣ ಎಚ್ಚರಿಸಿದ್ದಾರೆ.

ಸ್ಥಳೀಯ ಜನ ಸರ್ಕಾರಿ ಜಮೀನು ಅತಿಕ್ರಮಣ ಮಾಡಕೊಂಡವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಭೂರಹಿತರಿಗೆ ಹಂಚಿಕೆ ಮಾಡಲು ಸರ್ಕಾರ ಕ್ರಮ‌ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ABOUT THE AUTHOR

...view details