ಹುಬ್ಬಳ್ಳಿ: ಜಿಲ್ಲೆ ಎಷ್ಟೇ ಬೆಳವಣಿಗೆಯಾಗಿದ್ದರೂ ಕೂಡ ಇಲ್ಲೊಂದು ಸುಸಜ್ಜಿತ ವಿದ್ಯುತ್ ಚಿತಾಗಾರವಿಲ್ಲ. ಈ ಬಗ್ಗೆ ಸ್ಥಳೀಯರಿಂದ ಸಾಕಷ್ಟು ಬಾರಿ ಅಸಮಾಧಾನ ವ್ಯಕ್ತವಾಗಿದೆ. ಕೋವಿಡ್ ನಂತರ ಸಾವುನೋವು ಹೆಚ್ಚುತ್ತಿದ್ದು, ವಿದ್ಯುತ್ ಚಿತಾಗಾರ ಮಾತ್ರ ಇರಲಿಲ್ಲ. ಆದ್ರೀಗ ವಯೋಸಹಜವಾಗಿ ಹಾಗೂ ಇನ್ನಿತರೆ ಕಾರಣದಿಂದ ಮೃತಪಟ್ಟಿರುವವರ ದೇಹಗಳನ್ನು ಅಂತ್ಯಕ್ರಿಯೆ ಮಾಡಲು ಮಹಾನಗರ ಪಾಲಿಕೆ ವಿದ್ಯುತ್ ಚಿತಾಗಾರ ನಿರ್ಮಾಣದ ಯೋಜನೆಯನ್ನು ಆರಂಭಿಸಿದೆ.
ಈಗಾಗಲೇ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಮಂಟೂರ ರಸ್ತೆಯಲ್ಲಿರುವ ಹರಿಶ್ಚಂದ್ರ ಘಾಟ್ನಲ್ಲಿ ಒಂದು ವಿದ್ಯುತ್ ಚಿತಾಗಾರ ನಿರ್ಮಾಣ ಮಾಡಲಾಗುತ್ತಿದೆ. ಹು-ಧಾ ಮಹಾನಗರ ಪಾಲಿಕೆಯಿಂದ ಇನ್ನೂ ಎರಡು ವಿದ್ಯುತ್ ಚಿತಾಗಾರ ನಿರ್ಮಾಣ ಮಾಡುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. 11.80 ಲಕ್ಷ ಜನಸಂಖ್ಯೆ ಹೊಂದಿರುವ ಅವಳಿನಗರ ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿದ್ದು ಮೂಲಭೂತ ಸೌಲಭ್ಯಗಳ ವ್ಯವಸ್ಥೆಗೆ ವೇಗ ನೀಡಬೇಕಿದೆ.