ಕರ್ನಾಟಕ

karnataka

ETV Bharat / state

ವಿದ್ಯಾರ್ಥಿಗಳೇ ಭಯ ಬಿಡಿ, ಆತ್ಮ ವಿಶ್ವಾಸದಿಂದ ಪರೀಕ್ಷೆ ಎದುರಿಸಿ - ಪರೀಕ್ಷೆಯ ಸಿದ್ಧತೆ

ಗೌಳಿದಡ್ಡಿ, ತಂಬೂರ, ದೇವಿಕೊಪ್ಪ ತಾಂಡಾ, ಜುಂಜನಬೈಲ್ ಹಾಗೂ ತಂಬೂರ ಗ್ರಾಮಗಳ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳನ್ನು ಕ್ಷೇತ್ರ ಸಮನ್ವಯಾಧಿಕಾರಿ ಕುಮಾರ ಕೆ.ಎಫ್ ಭೇಟಿ ಮಾಡಿ, ಪರೀಕ್ಷಾ ತಯಾರಿ ಹಾಗೂ ಕೊರೊನಾ ಮುಂಜಾಗ್ರತಾ ಕ್ರಮಗಳ ಕುರಿತು ಚರ್ಚೆ ಮಾಡಿದರು.

Corona awareness among sslc students
Corona awareness among sslc students

By

Published : Jun 23, 2020, 6:22 PM IST

ಕಲಘಟಗಿ:ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳೇ ಭಯ ಬಿಡಿ, ಆತ್ಮ ವಿಶ್ವಾಸದಿಂದ ಪರೀಕ್ಷೆ ಎದುರಿಸಿ ಎಂದು ಕಲಘಟಗಿ‌ ಕ್ಷೇತ್ರ ಶಿಕ್ಷಣ ಇಲಾಖೆಯ ಮೂಲಕ ವಿದ್ಯಾರ್ಥಿಗಳಿಗೆ ತಿಳುವಳಿಕೆ ಮೂಡಿಸಲಾಯಿತು.

ತಾಲೂಕಿನ ಗೌಳಿದಡ್ಡಿ, ತಂಬೂರ, ದೇವಿಕೊಪ್ಪ ತಾಂಡಾ, ಜುಂಜನಬೈಲ್ ಹಾಗೂ ತಂಬೂರ ಗ್ರಾಮಗಳ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳನ್ನು ಕ್ಷೇತ್ರ ಸಮನ್ವಯಾಧಿಕಾರಿ ಕುಮಾರ ಕೆ.ಎಫ್ ಭೇಟಿ ಮಾಡಿ, ಪರೀಕ್ಷಾ ತಯಾರಿ ಹಾಗೂ ಕೊರೊನಾ ಮುಂಜಾಗ್ರತಾ ಕ್ರಮಗಳ ಕುರಿತು ಚರ್ಚೆ ಮಾಡಿದರು.

ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ನೀಡಿದರು‌. ಕ್ಷೇತ್ರ ಶಿಕ್ಷಣಾಧಿಕಾರಿಗಳ‌ ಕಚೇರಿ ಹಾಗೂ ಶಿಕ್ಷಣ ಇಲಾಖೆಯಿಂದ ಕೈಗೊಳ್ಳಲಾಗಿರುವ ವ್ಯವಸ್ಥೆ ಕುರಿತು ಹಾಗೂ ಸಾಮಾಜಿಕ ಅಂತರದ ಮಹತ್ವ, ಮಾಸ್ಕ್, ಪ್ರವೇಶ ಪತ್ರ, ಕುಡಿಯುವ ನೀರು, ಕೇಂದ್ರಕ್ಕೆ ಹೋಗಿ ಬರುವ ಬಸ್ ವ್ಯವಸ್ಥೆ ಕುರಿತು ಮಾಹಿತಿ ನೀಡಿದರು.

ಎಲ್ಲಾ ಗ್ರಾಮಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳ ಪಾಲಕರೊಂದಿಗೆ ಚರ್ಚಿಸಿ ಕೊರೊನಾ ಕುರಿತು ಜಾಗೃತಿ ಮೂಡಿಸಿದರು. ಜೊತೆಗೆ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಬರೆಯಲು ಧೈರ್ಯ ತುಂಬಿದರು.

ABOUT THE AUTHOR

...view details