ಕರ್ನಾಟಕ

karnataka

ETV Bharat / state

ಕುಂದಗೋಳದಲ್ಲಿ ಲಾಕ್​​ಡೌನ್ ಸ್ಥಿತಿಗತಿ ಪರಿಶೀಲಿಸಿದ ಡಿವೈಎಸ್ಪಿ ರವಿ ನಾಯಕ

ಕುಂದಗೋಳಕ್ಕೆ ಭೇಟಿ ನೀಡಿದ ಧಾರವಾಡ‌ ಜಿಲ್ಲಾ ಗ್ರಾಮೀಣ ಡಿವೈಎಸ್ಪಿ ರವಿ ನಾಯಕ ಅವರು, ಜನರ ಸಂಚಾರಕ್ಕೆ ಕಡಿವಾಣ ಹಾಕಲು ಕೈಗೊಳ್ಳಲಾದ ಲಾಕ್​ಡೌನ್​​ ಕ್ರಮಗಳ ಪರಿಶೀಲನೆ ನಡೆಸಿದರು.

DYSP Ravinayaka infection in kundagola
ಡಿವೈಎಸ್ಪಿ ರವಿ ನಾಯಕ

By

Published : Jul 20, 2020, 7:18 PM IST

ಹುಬ್ಬಳ್ಳಿ: ಇಲ್ಲಿನ ಕುಂದಗೋಳಕ್ಕೆ ಭೇಟಿ ನೀಡಿ ಜನರ ಸಂಚಾರಕ್ಕೆ ಕಡಿವಾಣ ಹಾಕಲು ಕೈಗೊಳ್ಳಲಾದ ಲಾಕ್​ಡೌನ್​​ ಕ್ರಮಗಳನ್ನು ಧಾರವಾಡ‌ ಜಿಲ್ಲಾ ಗ್ರಾಮೀಣ ಡಿವೈಎಸ್ಪಿ ರವಿ ನಾಯಕ ಅವರು ಪರಿಶೀಲನೆ ನಡೆಸಿದರು.

ಪಟ್ಟಣದ ಅಕ್ಷಯ ಇಂಡೇನ್ ಗ್ಯಾಸ್ ಡಿಸ್ಟ್ರಿಬ್ಯೂಟರ್ ಆಫೀಸ್ ಮುಂದೆ ಸಿಲಿಂಡರ್ ಪಡೆಯಲು ಜನರು ಗುಂಪು ಸೇರಿದ್ದರು. ಅದನ್ನು ನೋಡಿದ ಡಿವೈಎಸ್ಪಿ, ಕಚೇರಿಯಲ್ಲಿ ಸಿಲಿಂಡರ್ ನೀಡಿದರೆ ಜನದಟ್ಟಣೆ ಹೆಚ್ಚಾಗುತ್ತದೆ. ಅದಕ್ಕೆ ಕಡಿವಾಣ ಹಾಕಲು ನೀವೇ ಮನೆಗೆ ಹೋಗಿ ವಿತರಿಸಿ ಎಂದು ತಾಕೀತು ಮಾಡಿದರು.

ಪರಿಶೀಲನೆ ನಡೆಸಿದ ಡಿವೈಎಸ್ಪಿ ರವಿ ನಾಯಕ

ಮತ್ತೊಂದೆಡೆ ಪಟ್ಟಣದ ಮೆಡಿಕಲ್ ಶಾಪ್ ಮುಂದೆ ಸಾಮಾಜಿಕ ಅಂತರ ಮೀರಿ ಜಮಾಯಿಸಿದ್ದ ಜನರಿಗೆ ಇನ್ಸ್​​​ಪೆಕ್ಟರ್ ಬಸವರಾಜ ಕಲ್ಲಮ್ಮನವರ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ತಿಳಿಸಿದರು. ಮೆಡಿಕಲ್ ಶಾಪ್ ಮಾಲೀಕನಿಗೆ ದಂಡ ವಿಧಿಸಿದರು. ಪಟ್ಟಣದ ಮಾರ್ಕೆಟ್ ರಸ್ತೆ, ಬಸ್ ನಿಲ್ದಾಣ, ತಹಶೀಲ್ದಾರ ಕಚೇರಿ ರಸ್ತೆ, ಹುಬ್ಬಳ್ಳಿ ಲಕ್ಷ್ಮೇಶ್ವರ ರಸ್ತೆ ಸೇರಿದಂತೆ ಪಟ್ಟಣದ ವಿವಿಧೆಡೆ ಸಂಚರಿಸಿ ಡಿವೈಎಸ್ಪಿ ಪರಿಶೀಲನೆ ನಡೆಸಿದರು.

ABOUT THE AUTHOR

...view details