ಕರ್ನಾಟಕ

karnataka

ETV Bharat / state

ಹುಬ್ಬಳ್ಳಿಯಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ : ಅಧಿಕಾರಿಗಳಿಗೆ ಕರೆ ಮಾಡಿ ಕ್ಲಾಸ್​ ತೆಗೆದುಕೊಂಡ ಜನ - ಈಟಿವಿ ಭಾರತ ಕನ್ನಡ

ಹುಬ್ಬಳ್ಳಿಯಲ್ಲಿ ಕುಡಿಯುವ ನೀರಿಗಾಗಿ ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿ ಹೋರಾಟಕ್ಕೆ ಮುಂದಾಗಿದ್ದಾರೆ.

drinking water supply problem in hubli
ವಾಣಿಜ್ಯ ನಗರದಲ್ಲಿ ನಿಲ್ಲದ ಕುಡಿಯುವ ನೀರಿನ ಸಮಸ್ಯೆ

By

Published : Dec 19, 2022, 9:22 PM IST

ವಾಣಿಜ್ಯ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಅದೆಷ್ಟೋ ಸಭೆ ನಡೆಸಿ ನಿರ್ಧಾರ ಕೈಗೊಂಡರು ಜನರಿಗೆ ಮಾತ್ರ ಕುಡಿಯುವ ನೀರು ಸಿಗುತ್ತಿಲ್ಲ‌. ಇದರಿಂದ ಆಕ್ರೋಶಗೊಂಡಿರುವ ಜನರು ಹೋರಾಟಕ್ಕೆ ಮುಂದಾಗಿದ್ದಾರೆ.

ಎಲ್ ಆ್ಯಂಡ್ ಟಿ ಹಾಗೂ ಜಲಮಂಡಳಿಯ ಗುದ್ದಾಟದಲ್ಲಿ ಜನರು ಹೈರಾಣಾಗಿದ್ದಾರೆ. ಎಲ್ ಆ್ಯಂಡ್ ಟಿ ಅವ್ಯವಸ್ಥಿತ ನಿರ್ವಹಣೆಯಿಂದಲೋ ಅಥವಾ ಸರಿಯಾದ ನಿರ್ಧಾರ ಕೈಗೊಳ್ಳಲು ವಿಫಲರಾದ ಹಿನ್ನೆಲೆಯಲ್ಲಿಯೋ ಅಧಿಕಾರಿಗಳು ಅಸಹಾಯಕ ಸ್ಥಿತಿಯನ್ನು ತಲುಪಿದ್ದಾರೆ.

ಇದಿರಿಂದ ಕೋಪಗೊಂಡಿರುವ ಜನರು ಅಧಿಕಾರಿಗಳಿಗೆ ಕರೆ ಮಾಡಿ ಕುಡಿಯಲು ನೀರು ಪೂರೈಕೆ ಮಾಡದೆ ಇದ್ದಲ್ಲಿ ಅಧಿಕಾರಿಗಳ ವಿರುದ್ಧ ಹಾಗೂ ಜನಪ್ರತಿನಿಧಿಗಳ ವಿರುದ್ಧ ಜನರು ರಸ್ತೆಗೆ ಇಳಿದು ಹೋರಾಟ ಮಾಡಲಾಗುವುದಾಗಿ ಹೇಳಿದ್ದಾರೆ. ಇನ್ನು, ಹುಬ್ಬಳ್ಳಿಯ ಸನ್ಮತಿ ಲೇಔಟ್ ಅಭಿವೃದ್ಧಿ ಸಂಘದ ಲಿಂಗರಾಜನಗರ ಹಾಗೂ ಹನುಮಂತನಗರದ ನಿವಾಸಿಗಳು ನೀರಿಗಾಗಿ ಕೆಲಸ ಕಾರ್ಯಗಳನ್ನು ಬದಿಗಿಟ್ಟು ಹೋರಾಟ ನಡೆಸಿದ್ದಾರೆ.

ಇದನ್ನೂ ಓದಿ:'ನಾವು ಮನುಷ್ಯರೇ, ನಮಗೂ ನೀರು ಕೊಡಿ'.. ಖಾಲಿ ಕೊಡ ಹಿಡಿದು ಗ್ರಾಪಂ ಮುಂದೆ ನಾರಿಯರ ಪ್ರತಿಭಟನೆ..

For All Latest Updates

ABOUT THE AUTHOR

...view details