ಹುಬ್ಬಳ್ಳಿ :ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಒಳ ಚರಂಡಿ ಅವ್ಯವಸ್ಥೆಯ ಪರಿಣಾಮ ರಸ್ತೆ ಮೇಲೆ ನೀರು ಹರಿಯುತ್ತಿದೆ. ಇದರಿಂದಾಗಿ ಪಾಲಿಕೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿ ರಸ್ತೆ ಮೇಲೆ ಕಾಲುವೆಯಂತೆ ಹರಿದ ಚರಂಡಿ ನೀರು.. ಹೇಳೋರಿಲ್ಲ,ಕೇಳೋರಿಲ್ಲ - drainage problem
ಈ ರಸ್ತೆಯಲ್ಲಿ ಸಾವಿರಾರು ಜನರು ಓಡಾಡ್ತಾರೆ. ಚರಂಡಿ ನೀರಿನಿಂದ ರಸ್ತೆ ಸಂಪೂರ್ಣ ಕಸಮಯವಾಗಿದೆ. ಕೊರೊನಾ ಎಂಬ ಮಹಾಮಾರಿಯ ನಡುವೆ ಇನ್ನಿತರ ರೋಗಗಳು ಬರುವ ಲಕ್ಷಣಗಳಿವೆ..
ನಗರದ ವಾಣಿಜ್ಯ ಮಳಿಗೆಗಳಿರುವ ಮಹಿಳಾ ಕಾಲೇಜ್ ರಸ್ತೆಯಲ್ಲಿನ ಒಳಚರಂಡಿಯಿಂದ ನೀರು ಕಾಲುವೆಯಂತೆ ರಸ್ತೆ ಮೇಲುಗಡೆ ಹರಿಯುತ್ತಿದೆ. ಕಳೆದ ಎರಡು ವಾರಗಳಿಂದ ಚರಂಡಿ ಸಮಸ್ಯೆ ಇದ್ದರೂ ಕೂಡ ಪಾಲಿಕೆ ಅಧಿಕಾರಿಗಳು ಮಾತ್ರ ಇತ್ತ ಗಮನಹರಿಸಿಲ್ಲ. ಇದರಿಂದ ಅಂಗಡಿಗಳಿಗೆ ಬರುವ ಗ್ರಾಹಕರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಅಲ್ಲದೇ ಈ ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ ಕೂಡ ಜಾಸ್ತಿಯಾಗಿದೆ ಎಂದು ಅಂಗಡಿ ಮಾಲೀಕರು ಅಳಲು ತೋಡಿಕೊಂಡಿದ್ದಾರೆ.
ಅಷ್ಟೇ ಅಲ್ಲ, ಈ ರಸ್ತೆಯಲ್ಲಿ ಸಾವಿರಾರು ಜನರು ಓಡಾಡ್ತಾರೆ. ಚರಂಡಿ ನೀರಿನಿಂದ ರಸ್ತೆ ಸಂಪೂರ್ಣ ಕಸಮಯವಾಗಿದೆ. ಕೊರೊನಾ ಎಂಬ ಮಹಾಮಾರಿಯ ನಡುವೆ ಇನ್ನಿತರ ರೋಗಗಳು ಬರುವ ಲಕ್ಷಣಗಳಿವೆ. ಸ್ವಚ್ಛ ನಗರದ ಬಗ್ಗೆ ಮಾತನಾಡುವ ಪಾಲಿಕೆ ಅಧಿಕಾರಿಗಳು, ಇಂತಹ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಬೇಕು. ಇಲ್ಲವಾದ್ರೆ ಹೋರಾಟದ ಹಾದಿ ತುಳಿಯಬೇಕಾಗುತ್ತೆ ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.
ಸ್ಮಾರ್ಟ್ ಸಿಟಿಗೆ ಆಯ್ಕೆಯಾಗಿರುವ ಹುಬ್ಬಳ್ಳಿ ಅವ್ಯವಸ್ಥೆ ನೋಡಿದ್ರೆ ಎಲ್ಲರೂ ಅಚ್ಚರಿಪಡುವಂತಾಗಿದೆ. ಇಂತಹ ಅವ್ಯವಸ್ಥೆಗೆ ಕಡಿವಾಣ ಹಾಕಿ ಉತ್ತಮ ರಸ್ತೆಯ ಜೊತೆಗೆ ವೈಜ್ಞಾನಿಕ ಚರಂಡಿ ಕಲ್ಪಿಸಬೇಕು ಎನ್ನುವುದು ಸಾರ್ವಜನಿಕರ ಒತ್ತಾಯ.