ಕರ್ನಾಟಕ

karnataka

ETV Bharat / state

ಅಪಘಾತದಲ್ಲಿ ಗಾಯಗೊಂಡಿದ್ದ ವೈದ್ಯಾಧಿಕಾರಿ ಚಿಕಿತ್ಸೆ ಫಲಿಸದೆ ಸಾವು - injured in the accident, died today

ಗಾಯಗೊಂಡಿದ್ದ ಡಾ. ಸ್ಮಿತಾರನ್ನು ಕೂಡಲೇ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಚಿಕಿತ್ಸೆ ಫಲಿಸದೇ ಇಂದು ಡಾ.ಸ್ಮಿತಾ ಕಟ್ಟಿ ಮೃತಪಟಿದ್ದಾರೆ. ಇವರ ಸಾವಿನ ಸುದ್ದಿ ಕೇಳುತ್ತಿದ್ದಂತೆಯೇ ತಾಲೂಕಿನ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಕಂಬನಿ ಮಿಡಿದಿದೆ..

ಡಾ.ಸ್ಮೀತಾ
ಡಾ.ಸ್ಮೀತಾ

By

Published : Nov 28, 2020, 2:11 PM IST

ಹುಬ್ಬಳ್ಳಿ :ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅಣ್ಣಿಗೇರಿ ತಾಲೂಕಿನ ಬೆಳಹಾರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗಿನ ಜಾವ ಮೃತಪಟ್ಟಿದ್ದಾರೆ.

ಡಾ.ಸ್ಮಿತಾ ಕಟ್ಟಿ (30) ಮೃತಪಟ್ಟ ಆರೋಗ್ಯಾಧಿಕಾರಿ. ಇವರು ಕಳೆದ ಶನಿವಾರ ಇಲ್ಲಿನ ಭಂಡಿವಾಡ ಬಳಿ ಕಾರ್​ ಹಾಗೂ ಬುಲೆರೊ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಇದೇ ಅಪಘಾತದಲ್ಲಿ ತಾಯಿ ಶೋಭಾ ಹಾಗೂ ವಾಹನ ಚಾಲಕ ಮೃತ ಪಟ್ಟಿದ್ದರು.

ಗಾಯಗೊಂಡಿದ್ದ ಡಾ. ಸ್ಮಿತಾರನ್ನು ಕೂಡಲೇ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಚಿಕಿತ್ಸೆ ಫಲಿಸದೇ ಇಂದು ಡಾ.ಸ್ಮಿತಾ ಕಟ್ಟಿ ಮೃತಪಟಿದ್ದಾರೆ. ಇವರ ಸಾವಿನ ಸುದ್ದಿ ಕೇಳುತ್ತಿದ್ದಂತೆಯೇ ತಾಲೂಕಿನ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಕಂಬನಿ ಮಿಡಿದಿದೆ.

ABOUT THE AUTHOR

...view details