ಹುಬ್ಬಳ್ಳಿ:ಬಿಜೆಪಿಗೆ ಒಂದೇ ಮನೆ. ಬಿ ಎಸ್ ಯಡಿಯೂರಪ್ಪ ಪ್ರಶ್ನಾತೀತ ನಾಯಕ. ಇದನ್ನು ಸಹಿಸದೆ ವಿರೋಧ ಪಕ್ಷದವರು ಮಾತಾಡುತ್ತಿದ್ದಾರೆ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಕಾಂಗ್ರೆಸ್ ನಾಯಕರ ವಿರುದ್ದ ವಾಗ್ದಾಳಿ ನಡೆಸಿದರು.
ಬಿಜೆಪಿಗೆ ಒಂದೇ ಮನೆ: ಯಡಿಯೂರಪ್ಪ ಪ್ರಶ್ನಾತೀತ ನಾಯಕ- ಸಚಿವ ಸುಧಾಕರ್ - ಗುಜರಾತ್ ಮುಖ್ಯಮಂತ್ರಿ ಆಯ್ಕೆ
ಕಾಂಗ್ರೆಸ್ ಎರಡು ಸ್ಟೇರಿಂಗ್ ಇರುವ ಬಸ್. ಅವರಿಗೆ ಯಾವ ನೈತಿಕತೆ ಇದೆ ನಮ್ಮ ಬಗ್ಗೆ ಮಾತಾಡೋಕೆ? ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ವಾಗ್ದಾಳಿ ನಡೆಸಿದ್ದಾರೆ.
ಆರೋಗ್ಯ ಸಚಿವ ಡಾ ಕೆ ಸುಧಾಕರ್
ನಗರದಲ್ಲಿಂದು ಮಾತನಾಡಿದ ಅವರು, ಕಾಂಗ್ರೆಸ್ ಎರಡು ಸ್ಟೇರಿಂಗ್ ಇರುವ ಬಸ್. ಅವರಿಗೆ ಯಾವ ನೈತಿಕತೆ ಇದೆ ನಮ್ಮ ಬಗ್ಗೆ ಮಾತಾಡೋಕೆ?. ಯಡಿಯೂರಪ್ಪ ರಾಜೀನಾಮೆ ಕೊಟ್ಟ ಬಳಿಕ ಬೊಮ್ಮಾಯಿ ಹಾಲು ಜೇನು ಬೆರತಂತೆ ಕೆಲಸ ಮಾಡ್ತಿದ್ದಾರೆ. ಇದನ್ನು ಅವರಿಗೆ ಸಹಿಸೋಕೆ ಆಗ್ತಿಲ್ಲ.
ಕಾಂಗ್ರೆಸ್ನಲ್ಲಿ ದೆಹಲಿ ಬಾಗಿಲು, ರಾಮನಗರ ಬಾಗಿಲು, ಮೈಸೂರು ಬಾಗಿಲು ಇದೆ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ:ಕರ್ನಾಟಕದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ, ಸಂದೇಹವೇ ಬೇಡ: ಸಚಿವ ಸುಧಾಕರ್