ಕರ್ನಾಟಕ

karnataka

ETV Bharat / state

ಧಾರವಾಡ: ಉಪವಿಭಾಗಾಧಿಕಾರಿಯಾಗಿ ಡಾ.ಗೋಪಾಲಕೃಷ್ಣ ಬಿ ಇಂದು ಅಧಿಕಾರ ಸ್ವೀಕಾರ... - Dharwad

ಧಾರವಾಡ ಜಿಲ್ಲೆಯ ಉಪವಿಭಾಗಾಧಿಕಾರಿ ಹಾಗೂ ಉಪ ವಿಭಾಗ ದಂಡಾಧಿಕಾರಿಯಾಗಿ ಡಾ.ಗೋಪಾಲಕೃಷ್ಣ ಬಿ.ಇಂದು ಅಧಿಕಾರ ಸ್ವೀಕರಿಸಿದರು.

Dr. Gopalakrishna B
ಡಾ.ಗೋಪಾಲಕೃಷ್ಣ ಬಿ

By

Published : Aug 25, 2020, 9:19 PM IST

ಧಾರವಾಡ: ಇಲ್ಲಿನ ಉಪವಿಭಾಗಾಧಿಕಾರಿ ಹಾಗೂ ಉಪ ವಿಭಾಗ ದಂಡಾಧಿಕಾರಿಯಾಗಿ ಡಾ.ಗೋಪಾಲಕೃಷ್ಣ ಬಿ ಇಂದು ಅಧಿಕಾರ ಸ್ವೀಕರಿಸಿದರು.

ನಿಕಟಪೂರ್ವ ಉಪವಿಭಾಗಾಧಿಕಾರಿ ಮಹ್ಮದ್ ಜುಬೇರ್ ಅವರು ವರ್ಗಾವಣೆಯಾಗಿದ್ದು, ಹುದ್ದೆಯ ನಿರೀಕ್ಷೆಯಲ್ಲಿದ್ದಾರೆ. ಡಾ.ಗೋಪಾಲಕೃಷ್ಣ ಅವರು 2018 ರ ಬ್ಯಾಚಿನ ಐಎಎಸ್ ಅಧಿಕಾರಿಯಾಗಿದ್ದು, ಬೆಂಗಳೂರು ವೈದ್ಯಕೀಯ ಕಾಲೇಜಿನಿಂದ ಎಂಬಿಬಿಎಸ್ ಪದವಿ ಪಡೆದಿದ್ದಾರೆ. ಕೆಲಕಾಲ ವೈದ್ಯಕೀಯ ಸೇವೆ ಸಲ್ಲಿಸಿದ ಇವರು 2017 ರ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಆಡಿಟ್ ಸರ್ವಿಸ್​ಗೆ ಆಯ್ಕೆಯಾಗಿದ್ದರು. 2018 ರ ಪರೀಕ್ಷೆಗಳಲ್ಲಿ ಐಎಎಸ್​ಗೆ ಆಯ್ಕೆಯಾದರು.

ಉಪವಿಭಾಗಾಧಿಕಾರಿಯಾಗಿ ಡಾ.ಗೋಪಾಲಕೃಷ್ಣ ಬಿ ಅಧಿಕಾರ ಸ್ವೀಕರಿಸಿದರು.

ಕಲಬುರಗಿಯಲ್ಲಿ ಜಿಲ್ಲಾ ತರಬೇತಿ ಪೂರೈಸಿ ಇದೀಗ ಧಾರವಾಡ ಉಪವಿಭಾಗಾಧಿಕಾರಿ ಹುದ್ದೆಗೆ ನಿಯುಕ್ತಿಯಾಗಿದ್ದಾರೆ. ನೂತನ ಉಪವಿಭಾಗಾಧಿಕಾರಿಗಳನ್ನು ಜಿಲ್ಲೆಯ ತಹಶೀಲ್ದಾರ ಸಂತೋಷಕುಮಾರ ಬಿರಾದಾರ, ಶಶಿಧರ ಮಾಡ್ಯಾಳ, ಪ್ರಕಾಶ ನಾಶಿ, ಅಶೋಕ ಶಿಗ್ಗಾಂವಿ, ಅಮರೇಶ ಪಮ್ಮಾರ ಮತ್ತಿತರರು ಸ್ವಾಗತಿಸಿ, ಅಭಿನಂದಿಸಿದರು.

ABOUT THE AUTHOR

...view details